ಬೆಂಗಳೂರು:ದ್ವಿತೀಯ ಪಿಯುಸಿ ತರಗತಿಗೆ ಪ್ರವೇಶ ಪಡೆಯುವ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ವಿಶೇಷ ದಂಡ ಶುಲ್ಕದೊಂದಿಗೆ ದ್ವಿತೀಯ ಪಿಯುಸಿ ತರಗತಿಗೆ ಪ್ರವೇಶ ಪಡೆಯುವ ದಾಖಲಾತಿ ದಿನಾಂಕವನ್ನು ಜುಲೈ 22 ವರೆಗೆ ವಿಸ್ತರಿಸಿದೆ.
2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ ದಾಖಲಾತಿ ದಿನಾಂಕವನ್ನು ವಿಶೇಷ ದಂಡ ಶುಲ್ಕದೊಂದಿಗೆ ಜುಲೈ 8 ರವರೆಗೆ ನಿಗದಿಪಡಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ಮನಗಂಡ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೆ ಜುಲೈ 22ರವರೆಗೆ ವಿಶೇಷ ದಂಡಶುಲ್ಕದೊಂದಿಗೆ ವಿಸ್ತರಿಸಿ ಸುತ್ತೋಲೆಯನ್ನು ಹೊರಡಿಸಿದೆ.
ವಾರ್ಷಿಕವಾಗಿ ಕನಿಷ್ಠ 75 % ಹಾಜರಾತಿಯ ಅವಶ್ಯಕತೆ ಇರುವುದರಿಂದ ಈ ದಿನಾಂಕವನ್ನು ಮುಂದೆ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಇದು ಕೊನೆಯ ಅವಕಾಶವಾಗಿದೆ ಎಂದು ಪಿಯು ಬೋರ್ಡ್ ಸ್ಪಷ್ಟಪಡಿಸಿದೆ.
Kshetra Samachara
09/07/2022 12:59 pm