ಬೆಂಗಳೂರು : ಹೊಸ ವಿದ್ಯಾರ್ಥಿಗಳಿಗೆ ಹಳೇ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ರದ್ದು ಮಾಡಿದ ಪ್ರಸಂಗ ಬೆಂಗಳೂರು ವಿವಿ ನಿನ್ನೆ ( ಸೋಮವಾರ) ನಡೆದಿದೆ.ಬೆಂಗಳೂರು ವಿಶ್ವವಿದ್ಯಾ ಲಯದಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್ಗಳ ದೂರ ಶಿಕ್ಷಣ ಪರೀಕ್ಷೆಗಳು ಆರಂಭವಾಗಿವೆ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ನೋಡಿ ಆಶ್ಚರ್ಯ ಚಕಿತರಾದರು. ಒದಿದ್ದೊಂದು ಪ್ರಶ್ನೆ ಬಂದಿರೋದು ನೋಡಿ ದಂಗಾದರು.
ಬೆಂಗಳೂರು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ ಮೂಲಕ ಪದವಿ ಕೋರ್ಸ್ ಪ್ರವೇಶ ಪಡೆದಿದ್ದ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗಿವೆ. ಜೂನ್ 27 ರಂದು ಇಂಗ್ಲಿಷ್ ಪರೀಕ್ಷೆ ಇತ್ತು. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಹಳೆಯ ಪ್ರಶ್ನೆ ಪತ್ರಿಕೆ ನೀಡಿದ್ದು, ಇದನ್ನು ನೋಡಿದ ವಿದ್ಯಾರ್ಥಿಗಳು ಗಾಬರಿಯಾದರು.
ಅಭ್ಯರ್ಥಿಗಳು ಅಧ್ಯಯನ ಮಾಡಿದ್ದೇ ಬೇರೆ, ಪ್ರಶ್ನೆಪತ್ರಿಕೆಗಳಲ್ಲಿ ಕೇಳಲಾಗಿದ್ದ ಪ್ರಶ್ನೆಗಳೇ ಬೇರೆಯಾಗಿದ್ದವು. ಇದನ್ನು ಕಂಡ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ಆನಂತರದಲ್ಲಿ ಹಳೇ ಅಭ್ಯರ್ಥಿಗಳಿಗೆ ರೂಪಿಸಿದ್ದ ಪ್ರಶ್ನೆ ಪತ್ರಿಕೆಯನ್ನೇ, ಹೊಸ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು ಎಂಬುದನ್ನ ಪರೀಕ್ಷಾ ಮೇಲ್ವಿಚಾರಕರು ಖಚಿತಪಡಿಸಿದ್ದಾರೆ.
ಹೊಸ ಅಭ್ಯರ್ಥಿಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆ ಇಲ್ಲದ ಕಾರಣ, ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ನಂತರ ಅಭ್ಯರ್ಥಿಗಳು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದಾರೆ.
Kshetra Samachara
28/06/2022 05:24 pm