ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಪದವಿಪೂರ್ವ ಕಾಲೇಜು-ಪ್ರೌಢಶಾಲೆಯಲ್ಲಿ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಈ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮ ಕಡಿಮೆ ಬಂಡವಾಳದಲ್ಲಿ ವಿವಿಧ ಮಳಿಗೆ ತೆರೆದು ವ್ಯಾಪಾರ ಮಾಡಿದರು.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೈಸ್ಕೂಲ್ ವಿದ್ಯಾರ್ಥಿಗಳ ಬಳಿ ವ್ಯಾಪಾರ ಮಾಡಿ, ವ್ಯಾಪಾರದ ಮೂಲಕ ಲಾಭನಷ್ಟದ ಬಗ್ಗೆ ಪ್ರಾಯೋಗಿಕವಾಗಿ ಕಲಿಯುವುದೇ ಮೆಟ್ರಿಕ್ ಮೇಳದ ಉದ್ದೇಶವಾಗಿತ್ತು ಎಂದರು.
ಹಾಗೆಯೇ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಮಾತನಾಡಿ ಶಿಕ್ಷಣದಿಂದ ಪಡೆದ ವ್ಯವಹಾರಿಕ ಜ್ಞಾನ ಪ್ರಪಂಚದ ಎಲ್ಲಿ ಬೇಕಾದರು ಬದುಕುವ ಭರವಸೆ ಮೂಡಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯ್ತು. ಶಾಲೆಲಿ ಸೇವೆ ಸಲ್ಲಿಸಿ ವರ್ಗಾವಣೆ ಆದ ಶಿಕ್ಷಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
Kshetra Samachara
26/06/2022 10:05 am