ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KSRTC ಚಾಲಕನ ಮಗನ ಐಪಿಎಸ್ ಸಾಧನೆ

ಬೆಂಗಳೂರು- ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಾಲ್ಕಿ ಘಟಕದ ಚಾಲಕ ಮಾಣಿಕ್ ರಾವ್ ಅವರ ಮಗ ಅನುರಾಗ್ ಧರು ಯುಪಿಎಸ್ ಸಿ ಪರೀಕ್ಷೆಯಲ್ಲಿ 569ನೇ ರ್ಯಾಂಕ್ ಪಡೆದು ಕೊಂಡು ಐಪಿಎಸ್ ಗೆ ಆಯ್ಕೆ ಯಾಗಿದ್ದಾರೆ. ಅನುರಾಗ್ ಮತ್ತು ಅವರ ಪಾಲಕರನ್ನು ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಗೆ ಕರೆಸಿ ಗೌರವಿಸಲಾಯಿತು.

ಕೆಎಸ್ ಆರ್ ಟಿಸಿ ಅಧ್ಯಕ್ಷ ಎಂ.‌ಚಂ ದ್ರಪ್ಪ ಮಾತನಾಡಿ , ಚಾಲಕರು ಹಗಲಿರುಳು ಬಸ್ ಚಾಲನೆ ಮಾಡಿ ಕಷ್ಟಪಟ್ಟು ದುಡಿಯುತ್ತಾರೆ. ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸುವಲ್ಲಿ ಸಫಲರಾಗಿರೋದು ಶ್ಲಾಘನೀಯ ಹಾಗೂ ಮಾದರಿ ಎಂದು ಹೇಳಿದರು.

ಎಂ.ಡಿ. ಅನ್ಬುಕುಮಾರ್ ‌ಮಾತನಾಡಿ ಐಎಎಸ್ ಹಾಗೂ ಐಪಿಎಸ್ ಆಗಬೇಕೆಂಬ ಆಸೆ ಬಹಳಷ್ಟು ಮಂದಿಗೆ ಇರುತ್ತದೆ. ಅದರೆ ಅಷ್ಟು ಸುಲಭವಲ್ಲ. ಸಾಧನೆ, ಸತತ ಪ್ರಯತ್ನ, ಪರಿಶ್ರಮದಿಂದ ಮಾತ್ರ ಸಾಧ್ಯ. ನಮ್ಮ ಚಾಲಕರ ಮಗ ಈ ಸಾಧನೆ ಮಾಡಿರೋದು ಸಂಸ್ಥೆಗೆ ಹೆಮ್ಮೆ , ಗೌರವ ತಂದಿದೆ ಎಂದರು.

Edited By : Nirmala Aralikatti
Kshetra Samachara

Kshetra Samachara

23/06/2022 10:00 am

Cinque Terre

2.71 K

Cinque Terre

0

ಸಂಬಂಧಿತ ಸುದ್ದಿ