ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಮಾದರಿಯಾದ ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆ..

ದೇವನಹಳ್ಳಿ: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಅನ್ನ ಮತ್ತು ಅಕ್ಷರ ದಾಸೋಹದ ಮಹತ್ತರ ಸೇವೆಗೆ ಇಡೀ ಜಗತ್ತೆ ತಲೆದೂಗಿದೆ. ಇಂತಹ ಸೇವೆಯ ಫಲವಾಗಿ ಅಕ್ಷರ ಕಲಿತ ಹಳೆ ವಿದ್ಯಾರ್ಥಿಗಳು ಒಂದೊಳ್ಳೆ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನಗೆಲ್ಲೊ ವಿಷಯ ಕುರಿತು ಒಂದು ವಿಶೇಷ ವರದಿ ನಿಮಗಾಗಿ ಇಲ್ಲಿದೆ ನೋಡಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಶ್ರೀ ಸಿದ್ದಗಂಗಾ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜು ಶಿಕ್ಷಣ ಸಂಸ್ಥೆಯು ಹಲವು ದಶಕಗಳಿಂದ ವಿದ್ಯಾಧಾನ ಮಾಡುತ್ತಾ ಬಂದಿದೆ. ಇಲ್ಲಿ ಕಲಿತ ಸಾವಿರಾರು ಜನ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಕನ್ನಡ ಮಾಧ್ಯಮದ ಜೊತೆಗೆ ಕಡಿಮೆ ಖರ್ಚಿನಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆ ಪ್ರಾರಂಭಿಸಬೇಕೆಂದೆ ಹಳೆ ವಿದ್ಯಾರ್ಥಿಗಳು ಸಂಘ ಕಟ್ಟಿಕೊಂಡಿದ್ದಾರೆ. ಹೀಗೆ ಒಟ್ಟಾಗಿ ಲಕ್ಷಾಂತರ ರೂಪಾಯಿ ಹೊಂದಿಸಿ ನೂತನ ಕಟ್ಟಡ ನಿರ್ಮಿಸಿದ್ದಾರೆ. ಕಳೆದ ವರ್ಷ 20 ಜನ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಈಗ 111 ವಿದ್ಯಾರ್ಥಿಗಳು ಓದುತ್ತಿದ್ದಾರೆ ಇದೇ ನಮಗೆ ಖುಷಿ ಅಂತಾರೆ ಹಳೆ ವಿದ್ಯಾರ್ಥಿಗಳು ಮತ್ತವರ ಪ್ರಾಂಶುಪಾಲರು

ಗ್ರಾಮಾಂತರ ಭಾಗದಲ್ಲೂ ಪೋಷಕರು ತಮ್ಮ ಮಕ್ಕಳನ್ನ ಇಂಗ್ಲೀಷ್ ಮೀಡಿಯಂನಲ್ಲೆ ಓದಿಸಬೇಕೆಂದು ಆಸೆ ಪಡ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಮಕ್ಕಳ ವ್ಯಾಸಾಂಗ ಇಂಗ್ಲೀಷ್ ಮೀಡಿಯಂ ನಲ್ಲಿ ಆಗುತ್ತಿರುವುದರಿಂದ ಹೆಚ್ಚಿನ ಮಕ್ಕಳು ಸಹ LKG ಯಿಂದ 7ನೇ ತರಗತಿಯವರೆಗೂ ಅಡ್ಮೀಷನ್ ಆಗ್ತಿದ್ದಾರೆ. ದಿನೆ ದಿನೆ ಹೊಸದಾಗಿ ನಿರ್ಮಿಸಿರುವ ಇಂಗ್ಲೀಷ್ ಮೀಡಿಯಂ ಶಾಲೆಯ ಸ್ಟ್ರೇಂಥ್ ಸಹ ಹೆಚ್ಚಾಗ್ತಿದೆ. ನುರಿತ ಹತ್ತಕ್ಕು ಹೆಚ್ಚು ಜನ‌ ಶಿಕ್ಷಕ-ಶಿಕ್ಷಕಿಯರು ಓದಿನ‌ ಜೊತೆ, ಆಟ, ಓಟ ಯೋಗ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಗಮನ ಹರಿಸುತ್ತಿದ್ದಾರೆ.

ನಾಳೆ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೊಂದಿಕೊಂಡೆ ಶಿವಕುಮಾರ ಸ್ವಾಮಿಗಳ ಪುತ್ಥಳಿ ಅನಾವರಣ ನಡೆಯಲಿದೆ. ಈ ಅಂಗವಾಗಿ ಇಂದು ಶಾಲೆಯ ಆವರಣದಲ್ಲಿ ಹೋಮಹವನ ಕಾರ್ಯಕ್ರಮ ನಡೆಯಿತು. ಅಂತು ಗ್ರಾಮಾಂತರ ಭಾಗದಲ್ಲಿ ಸಿದ್ದಗಂಗಾ ಮಠದ ಶಾಲೆ ಕ್ಯಾಂಪಸ್‌ನ ಇಂಗ್ಲೀಷ್ ಸ್ಕೂಲ್ ಜನಮೆಚ್ಚುಗೆ ಪಡೆಯುತ್ತಿದೆ.

Edited By : Somashekar
Kshetra Samachara

Kshetra Samachara

22/06/2022 08:20 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ