ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಧಾನಿ ಆಗಮನ ಹಿನ್ನೆಲೆ; "ವಿದ್ಯಾಸಂಸ್ಥೆಗೆ ರಜೆ ಏಕೆ?" ಶಾಲಾಡಳಿತ ಆಕ್ರೋಶ

ಬೆಂಗಳೂರು: ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮ, ಉದ್ಘಾಟನೆ ಸಮಾರಂಭಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಆಗಮಿಸಲಿದ್ದಾರೆ. ಅವರು ಬರುತ್ತಿರುವ ದಾರಿಯಲ್ಲಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.

ಈ ಬಗ್ಗೆ ಶಾಲಾ ಅಧ್ಯಕ್ಷರು, ಮುಖ್ಯಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿಯವ್ರು ಬರ್ತಿರೋದಕ್ಕೂ‌ ಮಕ್ಕಳ ವಿದ್ಯಾಭ್ಯಾಸಕ್ಕೂ ಏನ್ ಸಂಬಂಧ!? ಸ್ಕೂಲ್ ಸ್ಟಾರ್ಟ್ ಆಗೋದು ಬೆಳಿಗ್ಗೆ 7- 8ರಿಂದ, ಮುಗಿಯೋದು ಸಂಜೆ 4- 5 ಗಂಟೆ ಆಗುತ್ತೆ. ಇದ್ರಲ್ಲಿ ಏನ್ ಪ್ರಾಬ್ಲಂ? ಕೊರೊನಾ ಸಂಕಷ್ಟದಿಂದಾಗಿ ಮೊದಲೇ ಮಕ್ಕಳಿಗೆ ಶಿಕ್ಷಣದ ಕೊರತೆ ಇದೆ. ಇನ್ನು, ಇಂತಹ ಕಾರ್ಯಕ್ರಮಗಳಿಂದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಾರದು ಎಂದು ಬೇಸರ ವ್ಯಕ್ತಪಡಿಸಿದರು.

-ರಂಜಿತಾ ಸುನಿಲ್ ʼಪಬ್ಲಿಕ್‌ ನೆಕ್ಸ್ಟ್‌ʼ ಬೆಂಗಳೂರು

Edited By : Shivu K
Kshetra Samachara

Kshetra Samachara

20/06/2022 01:50 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ