ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆನೇಕಲ್‌ನ ಎ.ಎಸ್ ಆದಿತ್ಯ SSLC ಪರೀಕ್ಷೆಯಲ್ಲಿ ಔಟ್ ಆಫ್ ಔಟ್

ವರದಿ: ಹರೀಶ್ ಗೌತಮನಂದ

ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಆನೇಕಲ್ ತಾಲೂಕಿನ ಸರ್ಜಾಪುರ ಸರ್ದಾರ್ ವಲ್ಲಭಬಾಯಿ ಪಟೇಲ್ ಶಾಲೆಯ ವಿದ್ಯಾರ್ಥಿ ಎ.ಎಸ್ ಆದಿತ್ಯ 625ಕ್ಕೆ 625 ಅಂಕ ಪಡೆದು ರಾಜ್ಯ, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಪ್ರಥಮ ಸ್ಥಾನ ಗಳಿಸಿದ ಆದಿತ್ಯಗೆ ಸರ್ಜಾಪುರದ ಸರ್ದಾರ್ ವಲ್ಲಭಾಯಿ ಪಟೇಲ್ ಶಾಲೆಯ ಆಡಳಿತ ಮಂಡಳಿ ಸಿಹಿ ತಿನ್ನಿಸಿ ಗೌರವಿಸಿದರು. ಇನ್ನು ಆದಿತ್ಯನ ತಂದೆ ಶ್ರೀನಿವಾಸ್ ಅರ್ಚಕರಾಗಿದ್ದು, ತಾಯಿ ಸುಭಾಶಿನಿ ಗೃಹಿಣಿಯಾಗಿದ್ದು, ಮನೆ ನಿಬಾಯಿಸಿಕೊಂಡು ಹೋಗುತ್ತಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಓದಿಗೆ ಬಡತನ ಇಲ್ಲ‌ ಎನ್ನುವುದನ್ನು ವಿದ್ಯಾರ್ಥಿ ಆದಿತ್ಯ ಸಾಧಿಸಿ ತೋರಿಸಿದ್ದಾನೆ.

ಗ್ರಾಮೀಣ ಭಾಗದಿಂದ ಬಂದು ಪ್ರತಿದಿನ ಸರ್ಜಾಪುರದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಉತ್ತಮ ಸಾಧನೆ ಮಾಡುವ ಮೂಲಕ ಆನೇಕಲ್ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರವಾದ ಜ್ಞಾನ ಅಡಗಿರುತ್ತದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಚಲನಚಿತ್ರ ನಿರ್ಮಾಪಕ ಸಿ.ಆರ್ ಮನೋಹರ್ ತಿಳಿಸಿದ್ದಾರೆ. ಜೊತೆಗೆ ಅವರು ವಿದ್ಯಾರ್ಥಿ ಆದಿತ್ಯಗೆ 50 ಸಾವಿರ ರೂ. ಪ್ರೋತ್ಸಾಹ ದನ ನೀಡಿ ಗೌರವಿಸಿದ್ದಾರೆ.

ಹಲವಾರು ವರ್ಷಗಳ ಇತಿಹಾಸ ಇರುವ ಎಸ್‌ವಿಪಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ರಾಜ್ಯದಲ್ಲಿ ಹಾಗೂ ದೇಶ-ವಿದೇಶ ಅಲ್ಲದೆ ಹಲವಾರು ಉನ್ನತ ಸ್ಥಾನಗಳನ್ನು ಗಳಿಸಿದ್ದಾರೆ. ಇಂತಹ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರುವ ಕೆಲಸವನ್ನು ಶಿಕ್ಷಣಸಂಸ್ಥೆಗಳು ಮಾಡಬೇಕು. ಸರ್ಜಾಪುರ ಸಮೀಪದ ಕಾಮನಹಳ್ಳಿಯಿಂದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿ ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠ ಪ್ರವಚನವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಿದ್ದ. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿಗೆ ಕೂಡ ಹೆಸರು ಬರುವಂತಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಡಾ. ರವೀಂದ್ರ ರೆಡ್ಡಿ ಹೇಳಿದ್ದಾರೆ.

-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Shivu K
Kshetra Samachara

Kshetra Samachara

19/05/2022 08:56 pm

Cinque Terre

3.01 K

Cinque Terre

0

ಸಂಬಂಧಿತ ಸುದ್ದಿ