ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದಿನಿಂದ ಶಾಲೆ ಆರಂಭ ಹಿನ್ನೆಲೆ ಬಿಎಂಟಿಸಿಯಿಂದ ಉಚಿತ್ ಬಸ್ ಪಾಸ್

ಬೆಂಗಳೂರು: ಬೇಸಿಗೆ ರಜೆಯಲ್ಲಿ ಇದ್ದ ಶಾಲಾ ವಿದ್ಯಾರ್ಥಿಗಳಿಗೆ ಇಂದಿನಿಂದ ಶಾಲೆ ಪ್ರಾರಂಭ ವಾಗಿದೆ. ಈ ಸಂಬಂಧ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್ ಪಾಸ್ ವ್ಯವಸ್ಥೆ ಬಿಎಂಟಿಸಿ ಮಾಡಿದೆ.

2021-22 ವರ್ಷದಲ್ಲಿ ಪಡೆದ ಬಸ್ ಅನ್ನೂ ಜೂನ್ 2022 ರವೆಗೆ ವಿದ್ಯಾರ್ಥಿಗಳು ಬಳಕೆ‌ ಮಾಡಿ ಕೊಳ್ಳಬಹುದು.ಪ್ರವೇಶಾತಿ ರಶೀದಿ, ಐಡಿ‌ಕಾರ್ಡ್ ತೋರಿಸಿ ಮಕ್ಕಳು ಉಚಿತವಾಗಿ ಬಸ್ ನಲ್ಲಿ ಪ್ರಯಾಣ‌ ಮಾಡಬಹುದು. ಇನ್ನೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕೂಡಾ‌ ಹಳೆಯ ಪಾಸ್ ತೋರಿಸಿ ಬಸ್ ನಲ್ಲಿ ಪ್ರಯಾಣ ಮಾಡ ಬಹುದು.

2022-23 ನೇ ಸಾಲಿನ ಬಸ್ ಪಾಸ್ ವಿತರಣೆ ದಿನಾಂಕ ಶೀಘ್ರ ದಲ್ಲೇ ಪ್ರಕಟಿಸಲಾಗುತ್ತದೆ. ಪಾಸ್ ಗಾಗಿ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೆಎಸ್ ಆರ್ ಟಿಸಿ‌ ನಿಗಮ ಪ್ರಕಟಣೆ ಯಲ್ಲಿ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

16/05/2022 05:20 pm

Cinque Terre

950

Cinque Terre

0

ಸಂಬಂಧಿತ ಸುದ್ದಿ