ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಿಂದೂ ಪರ ಸಂಘಟನೆಗಳ ಬೈಬಲ್ ಕಡ್ಡಾಯ ಆರೋಪಕ್ಕೆ ಕ್ಲಾರೆನ್ಸ್ ಶಾಲೆ ಸ್ಪಷ್ಟನೆ !

ವರದಿ : ಗಣೇಶ್ ಹೆಗಡೆ

ಬೆಂಗಳೂರು: ಹಿಂದೂ ಪರ ಸಂಘಟನೆಗಳು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕ್ಲಾರೆನ್ಸ್ ಶಾಲೆಯ ಪ್ರಾಂಶುಪಾಲ ಜೆರ್ರಿ ಜಾರ್ಜ್ ಮ್ಯಾಥ್ಯೂ, ನಮ್ಮ ಶಾಲೆಯಲ್ಲಿ ಬೈಬಲ್ ಓದು ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ಮುಂದುವರೆದು, ಈ ನೆಲದ ಕಾನೂನಿಗೆ ಬದ್ಧವಾಗಿಯೇ ನಾವು ಶಾಲೆ ನಡೆಸುತ್ತಿದ್ದೇವೆ. ಈ ಸಂಬಂಧ ಶಿಕ್ಷಣ ಇಲಾಖೆಯಿಂದ ನೋಟೀಸ್ ಬಂದಿದೆ. ಕಾನೂನು ತಜ್ಞರ ಸಲಹೆ ಪಡೆದುಕೊಂಡು ನೋಟೀಸ್ ಗೆ ಉತ್ತರ ಕೊಡುತ್ತೇವೆ ಎಂದರು.

ಬೈಬಲ್ ವಿವಾದದ ಬಗ್ಗೆ ಬೇಸರ ವ್ಯಕ್ತಪಡಿಸಿದ ಆರ್ಚ್ ಬಿಷಪ್ ಪೀಟರ್ ಮಚಾಡೋ !

ಇನ್ನು ಕ್ಲಾರೆನ್ಸ್ ಶಾಲೆ ಮೇಲೆ ಬಂದಿರುವ ಆರೋಪ ಸಂಬಂಧ ಕ್ರೈಸ್ತ ಧರ್ಮಗುರು ಆರ್ಚ್ ಬಿಷಪ್ ಪೀಟರ್ ಮಚಾಡೋ ಬೇಸರ ವ್ಯಕ್ತಪಡಿಸಿದ್ದಾರೆ. ಹೈಸ್ಕೂಲ್ ನಲ್ಲಿ ನಡೆದ ಪ್ರೆಸ್ ಮೀಟ್ ವೇಳೆ ಮಾತನಾಡಿದ ಆರ್ಚ್ ಬಿಷಪ್, ಕ್ಲಾರೆನ್ಸ್ ಶಾಲೆಗೆ ನೂರು ವರ್ಷದ ಇತಿಹಾಸವಿದೆ. ಎಲ್ಲಾ ಧರ್ಮಗಳ ಮಕ್ಕಳು ಈ ಶಾಲೆಯಿಂದ ಶಿಕ್ಷಣ ಪಡೆದಿದ್ದಾರೆ. ಪಡೆಯುತ್ತಿದ್ದಾರೆ. ಕೆಲ ಸಂಘಟನೆಗಳು ಮಾತ್ರ ಈ ಆರೋಪ ಮಾಡುತ್ತಿದೆ. ಕ್ಲಾರೆನ್ಸ್ ಶಾಲೆ ಮತಾಂತರ ಮಾಡಿದ ದಾಖಲೆ ಇದ್ದರೆ ಸರ್ಕಾರ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.

ಆದರೆ ಈ ಬಗ್ಗೆ ಸ್ವತಃ ಶಾಲೆಯ ವಿದ್ಯಾರ್ಥಿಗಳೇ ಬೈಬಲ್ ಓದು ಕಡ್ಡಾಯ ಎಂಬುವುದನ್ನು ಒಪ್ಪಿಕೊಂಡಿದ್ದರು. ಸದ್ಯ ಈ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಕ್ಲಾರೆನ್ಸ್ ಶಾಲೆ ಆಡಳಿತ ಮಂಡಳಿ ಈ ಆರೋಪ ತಳ್ಳಿಹಾಕಿದ್ದು, ಇದು ಸುಳ್ಳು ಎಂದಿದೆ.

Edited By :
PublicNext

PublicNext

28/04/2022 06:35 pm

Cinque Terre

17.16 K

Cinque Terre

0

ಸಂಬಂಧಿತ ಸುದ್ದಿ