ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ಯ, ಪ್ರಾಮಾಣಿಕತೆಗೆ ಸಂದ ಜಯ - ಪ್ರೋ ವೇಣುಗೋಪಾಲ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊಫೆಸರ್ ಕೆ.ಆರ್.ವೇಣುಗೋಪಾಲ್ ಅವರು ಮುಂದುವರಿಯಲಿದ್ದಾರೆ. ಅವರ ನೇಮಕವನ್ನು ರದ್ದುಗೊಳಿಸಿದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿತ್ತು.

ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಬೆ.ವಿವಿ ಕುಲಪತಿ ಡಾ.ವೇಣುಗೋಪಾಲ ಸತ್ಯ, ಪ್ರಾಮಾಣಿಕತೆ ಕಡೆಗೂ ಜಯ ಸಿಕ್ಕಿದೆ ಎಂದಿದ್ದಾರೆ. ನನ್ನ ಜೀವನದ 48 ವರ್ಷ ಬೆಂಗಳೂರು ವಿಶ್ವವಿದ್ಯಾಲಯ ಕಳೆದಿದ್ದೇನೆ. ಸುಳ್ಳು, ಅಪ ಪ್ರಚಾರ, ಭ್ರಷ್ಟಾಚಾರ ಹಾಗೂ ಸಮಾಜದ ಕಾಂಪಿಟೇಷನ್ ನಿಂದ ಈ ರೀತಿ ಪ್ರಕರಣಗಳು ಸೃಷ್ಟಿಯಾಗುತ್ತೆ. ನಾನಾ ರೀತಿಯಲ್ಲಿ ಅನುಭವಿಸಿ ಬಂದವನು ನಾನು. ಕಡೆಗೂ ಸತ್ಯದ ಪರವಾಗಿ ನ್ಯಾಯಾಲಯ ನಿಂತಿದೆ ಎಂದಿದ್ದಾರೆ.

ಇನ್ನೂ ಇದೇ ಜೂನ್ 12ಕ್ಕೆ ನಿವೃತ್ತರಾಗಲಿರುವ ಪ್ರೊ.ಕೆ.ಆರ್.ವೇಣುಗೋಪಾಲ್ ಬಹುತೇಕ ಅಲ್ಲಿಯವರೆಗೆ ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ.

Edited By :
Kshetra Samachara

Kshetra Samachara

07/04/2022 07:31 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ