ಬೆಂಗಳೂರು: ಹಿಜಾಬ್ ವಿವಾದದ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿಕೊಂಡಿದೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಖಡಕ್ಕಾಗಿ ಆದೇಶ ನೀಡಿದೆ. ಈ ಆದೇಶ ಮುಸ್ಲಿಂ ವಿದ್ಯಾರ್ಥಿನಿಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಈ ಬಾರಿ ನಡೆಯುವ ಪರೀಕ್ಷೆಯ ಕಡೆ ಎಲ್ಲರ ಚಿತ್ತ ವಾಲಿದೆ.
ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ
ಬಾಲಕರು 4,52,765
ಬಾಲಕಿಯರು 4.21,110
ವಿಭಿನ್ನ ಸಾಮರ್ಥ್ಯ ಮಕ್ಕಳು 5,307
ತೃತೀಯ ಲಿಂಗಿ 04
ಒಟ್ಟು ವಿದ್ಯಾರ್ಥಿಗಳು 8,73, 846
ಪರೀಕ್ಷಾ ಕೇಂದ್ರಗಳು 3,444
ಒಟ್ನಲ್ಲಿ ಈ ಬಾರಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ ಬಾರಿ ಕುತೂಹಲ ಉಂಟು ಮಾಡಿದೆ.ಹಿಜಾಬ್ ವಿವಾದ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರಾ? ಹೇಗೆ ? ಅವರ ಭವಿಷ್ಯಕ್ಕೆ ಅವರೇ ಕೊಳ್ಳಿಹಿಟ್ಟಕೊಳ್ತಾರೋ? ಎಂಬ ಹತ್ತಾರು ಪ್ರಶ್ನೆ ಕಾಡ್ತಿದೆ. ಈ ಪ್ರಶ್ನೆಗಳಿಗೆ ವಿದ್ಯಾರ್ಥಿಗಳೇ ಉತ್ತರ ಕೊಡಬೇಕು. ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಮೂಲಕ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆಯುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.
Kshetra Samachara
26/03/2022 06:26 pm