ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ:

ಬೆಂಗಳೂರು‌- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಆಯೋಗದಲ್ಲಿ ನಡೆಯುತ್ತಿರುವ ಫ್ರೀ ನರ್ಸರಿ ತರಗತಿಗೆ 2022-23ನೇ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.

ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್ ವಾರ್ಡ್ ನಂ. 97, ನಂ. 215ನೇ ಮುಖ್ಯ ರಸ್ತೆ ಕ್ರಾಂತಿಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಂಗಳೂರು-21 ಈ ವಿದ್ಯಾಸಂಸ್ಥೆಯ ಶಿಶುವಿಹಾರಕ್ಕೆ ಪಾಲಿಕೆಯವತಿಯಿಂದ ಶೇ. 50 ರಷ್ಟು ಸೀಟುಗಳನ್ನು ಉಚಿತವಾಗಿ ಬಡವರ್ಗದ ವಿದ್ಯಾರ್ಥಿಗಳಿಗೆ ಐ.ಸಿ.ಎಸ್.ಸಿ ಪಠ್ಯಾಧಾರಿತ ಮುಖಾಂತರ ವಿದ್ಯಾಭ್ಯಾಸ ನೀಡುವ ಸಲುವಾಗಿ ಈ ಕೆಳಕಂಡ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿರುತ್ತದೆ.

*ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:*

1 . ಮಗುವಿನ ಪಾಸ್ ಪೋಟ್೯ ಸೈಜ್ ಫೋಟೋ - 5 ಸಂಖ್ಯೆ

2. ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವ ಚಿತ್ರ)

3. ಮಗುವಿನ ಜನನ ಪ್ರಮಾಣ ಪತ್ರ

4. ಅದಾಯ ಪ್ರಮಾಣ ಪತ್ರ

5. ಜಾತಿ ಪ್ರಮಾಣ ಪತ್ರ

6. ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್

7. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್

8. ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ

9. ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಲೋ. ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು.

10. ಮಗುವಿನ ವೈಧ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು(ಎತ್ತರ, ತೂಕ, ರಕ್ತದ ಗುಂಪು)

ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 22-03-2022 ರಿಂದ 31-03-2022.

ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ(ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು. 08-04-2022 ರಿಂದ ಅರ್ಜಿಯ ಪರಿಶೀಲನೆ ನಡೆಯಲಿದೆ.

Edited By : PublicNext Desk
Kshetra Samachara

Kshetra Samachara

04/03/2022 12:14 pm

Cinque Terre

496

Cinque Terre

0

ಸಂಬಂಧಿತ ಸುದ್ದಿ