ದೇವನಹಳ್ಳಿ : ಇಂದು ಶಾಲೆಗಳು ಪ್ರಾರಂಭವಾದ ಹಿನ್ನೆಲೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಮೂರು ದಿನಗಳಿಂದ ರಜೆ ಇದ್ದ ಹಿನ್ನೆಲೆ ಇಂದು ಶಾಲೆಗಳು ಪುನರಾಗಮನವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ವೇಳೆ ಜಿಲ್ಲಾಧಿಕಾರಿ ಶ್ರೀನಿವಾಸ್ ದೇವನಹಳ್ಳಿಯ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಈ ಸಂದರ್ಭ ಮಕ್ಕಳಲ್ಲಿ, ಯಾವ ರೀತಿ ಪಾಠ ಮಾಡ್ತಿದ್ದಾರೆ? ಅರ್ಥವಾಗುತ್ತ ಎಂದು ಕೇಳಿ ಮಾಹಿತಿ ಪಡೆದ್ರು.. ಇನ್ನೂ ಶಾಲಾ ಸಿಬ್ಬಂದಿಯಲ್ಲಿ ಮಕ್ಕಳ ನಡೆ ನುಡಿ, ಶಾಲಾ ಸಮವಸ್ತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದ್ರು. ಸೂಕ್ತ ಭದ್ರತೆಯೊಂದಿಗೆ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು, ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದರೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.
Kshetra Samachara
14/02/2022 08:06 pm