ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಂತ್ರಿಕ ಸಲಹಾ ಸಮಿತಿ ಒಪ್ಪಿದ್ರೆ ಶಾಲೆ ತೆರೆಯಲು ಸಿದ್ದ - ಸಚಿವ ನಾಗೇಶ್

ವರದಿ - ಗಣೇಶ್ ಹೆಗಡೆ

ಬೆಂಗಳೂರು - ರಾಜ್ಯದಲ್ಲಿ ಕೊರೋನಾ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ನಡುವೆ ಶಿಕ್ಷಣ ಸಚಿವ ಬಿಸಿ ನಾಗೇಶ್ ತಾಂತ್ರಿಕ ಸಲಹಾ ಸಮಿತಿ ನಾಳೆ ಅನುಮತಿ ಕೊಟ್ಟರೆ ಮಹಾನಗರಗಳಲ್ಲೂ ಶಾಲೆ ಓಪನ್ ಮಾಡುತ್ತೇವೆ ಎಂದಿದ್ದಾರೆ. ಸಲಹಾ ಸಮಿತಿ ಅಂತಿಮ ನಿರ್ಣಯ ಕೊಟ್ಟ ಮೇಲೆ ಸಿಎಂ ಜತೆ ಶಾಲೆ ತೆರೆಯುವುದರ ಬಗ್ಗೆ ಚರ್ಚಿಸಿ ಅಂತಿಮಗೊಳಿಸುತ್ತೇವೆ. 0-5 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ ಇದೆ. ಆದರೆ ಎಸ್ಎಸ್ಎಲ್​ಸಿ ಪಿಯುಸಿ ಮಕ್ಕಳಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ನಾವು ಶೈಕ್ಷಣಿಕ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಅಂತ ಅನಿಸುತ್ತದೆ ಎಂದಿದ್ದಾರೆ. 1ರಿಂದ 10 ನೇ ತರಗತಿಯಲ್ಲಿ ನಿನ್ನೆ 1250 ಮಕ್ಕಳಲ್ಲಿ ಕೊರೋನಾ ದೃಢಪಟ್ಟಿದೆ, ಒಟ್ಟು ಕೇಸ್ 6752 ಸಕ್ರಿಯ ಪ್ರಕರಣಗಳಿವೆ. ಇನ್ನು ನಿನ್ನೆ ಒಂದೇ ದಿನ, ಪಿಯುಸಿಯ 166 ಮಕ್ಕಳಿಗೆ ನಿನ್ನೆ ಪಾಸಿಟಿವ್ ಆಗಿದೆ. 897 ಆ್ಯಕ್ಟಿವ್ ಕೇಸ್​ನಲ್ಲಿ ಪಿಯುಸಿ ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಸಿಎಂ ನೇತೃತ್ವದ ಸಭೆಯಲ್ಲಿ ಶಿಕ್ಷಣ ಇಲಾಖೆ ಕಡೆಯಿಂದ ಕಳೆದ ಎರಡೂ ಕೋವಿಡ್ ನಿಂದ ಆದ ಸಮಸ್ಯೆಗಳ ಬಗ್ಗೆ ವಿವರಿಸಿದ್ದೆವು. ಕಳೆದ ಬಾರಿ ತರಹ ರಾಜ್ಯದಲ್ಲಿ ಒಂದೇ ಸಲ ಶಾಲೆ ಬಂದ್ ಮಾಡಬಾರದು ಅಂತ ನಿರ್ಣಯ ತೆಗೆದುಕೊಂಡೆವು.

ಜಿಲ್ಲಾಧಿಕಾರಿಗಳಿಗೆ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು.ಅನೇಕ ಜಿಲ್ಲೆಗಳಲ್ಲಿ ಈಗಲೂ ಕೂಡ ಸಂಪೂರ್ಣವಾಗಿ ಶಾಲೆಗಳು ಕ್ಲೋಸ್ ಆಗಿಲ್ಲ. ಮೈಸೂರು, ತುಮಕೂರು ಸೇರಿ ಕೆಲವು ಮಹಾನಗರಗಳಲ್ಲಿ ಶಾಲೆಗಳನ್ನು ಕ್ಲೋಸ್ ಮಾಡಲಾಗಿತ್ತು. ಈವರೆಗೂ ಕೋವಿಡ್ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಿಲ್ಲ. ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ 80 ಪ್ರತಿಶತದಷ್ಟು ಸಿಲೆಬಸ್ ಕಂಪ್ಲೀಟ್ ಮಾಡಿದ್ದೇವೆ. ಮಕ್ಕಳ ಪಾಸಿಟಿವಿಟಿ ರೇಟ್ ಕೂಡ ಅನಲೈಸ್ ಮಾಡಿದ್ದೇವೆ. ನಾಳೆ ಸಿಎಂ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

20/01/2022 01:41 pm

Cinque Terre

168

Cinque Terre

0

ಸಂಬಂಧಿತ ಸುದ್ದಿ