ಬೆಂಗಳೂರು: ರಾಜ್ಯವನ್ನ ಕೋವಿಡ್ ಕಾಡಿದೆ. ನಲಗುವುಂತೆ ಮಾಡಿದೆ. ಇದರ ನಡುವೇನೆ 6 ರಿಂದ 12 ರ ವರೆಗೆ ಶಾಲೆ-ಕಾಲೇಜುಗಳು ಆರಂಭಗೊಂಡಿವೆ. ಆದರೆ ಇಲ್ಲಿವರೆಗೂ 1 ರಿಂದ 5 ನೇ ತರಗತಿಗಳು ಇನ್ನು ಶುರು ಆಗಿರಲಿಲ್ಲ.ಈಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ.
ಇದೇ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಮೀಟಿಂಗ್ ಅಲ್ಲಿಯೇ 1 ರಿಂದ 5 ನೇ ತರಗತಿಗಳನ್ನ ಯಾವಾಗ ಶುರು ಮಾಡಬೇಕು ಅನ್ನೋ ವಿಚಾರ ಚರ್ಚೆ ಆಗುತ್ತಿದ್ದು, ಸಭೆಯ ಬಳಿಕ ಶಾಲೆ ಆರಂಭದ ದಿನವೂ ಪ್ರಕಟವಾಗುತ್ತಿದೆ.
ಬೆಂಗಳೂರಿನ ಸಿಎಂ ಕಚೇರಿ ಕೃಷ್ಣಾದಲ್ಲಿ ಈ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಶಿಕ್ಷಣ ಸಚಿವ ಬಿ.ಸಿ.ನಾಗೇಶ್,ಸಾರಿಗೆ ಸಚಿವ ಶ್ರೀರಾಮುಲು,ಇಲಾಖೆ ಅಧಿಕಾರಿಗಳು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಭಾಗಿಯಾಗಲಿದ್ದಾರೆ.
Kshetra Samachara
16/10/2021 04:55 pm