ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅದ್ದೂರಿಯಾಗಿ ಛತ್ರಪತಿ ಶಾಹು ಮಹಾರಾಜರ ಜನ್ಮದಿನಾಚರಣೆ

ಬೆಂಗಳೂರು: ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಾಹು ಮಹಾರಾಜರ 148ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ದಲಿತ ಮುಖಂಡರಾದ ಬಿ.ಗೋಪಾಲ್, ರಾವಣ, ವೆಂಕಟೇಶ್ ಮೂರ್ತಿ ಗೌತಮ್ ವೆಂಕಿ, ಸುರೇಶ್ ಪೋತ, ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ , ಇನ್ಸ್‌ಪೆಕ್ಟರ್ ಮಹಾನಂದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ್ದ ಶಾಹು ಮಹಾರಾಜ್ ಅವರು ಬ್ರಾಹಣ್ಯತ್ವದ ವಿರುದ್ಧ ಬಹುದೊಡ್ಡ ಧ್ವನಿ ಎತ್ತುವ ಮೂಲಕ ಶೂದ್ರರ ಪರವಾಗಿ ಹಲವು ಸುಧಾರಣೆಗಳನ್ನು ತಂದವರು. ಆ ಕಾಲದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದಲ್ಲಿ ಗೆಳೆಯರಾಗಿ ಅವರ ಮೂಕನಾಯಕ್ ಪತ್ರಿಕೆ ತರಲು ಪ್ರೋತ್ಸಾಹ ನೀಡಿದ್ದರು. ಹಿಂದುಳಿದ ವರ್ಗ ಅಲ್ಪಸಂಖ್ಯಾತ ಹಾಗೂ ದಲಿತರಿಗೆ ಮೀಸಲಾತಿಯನ್ನು ಜಾರಿಗೆ ತಂದ ಮಹಾನ್ ಚೇತನ ಶಾಹು ಮಹಾರಾಜರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹೆಬ್ಬಗೋಡಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಶಾಹು ಮಹಾರಾಜರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ರವರು ಬರೆದಿರುವ RSS ಆಳ ಮತ್ತು ಅಗಲ ಪುಸ್ತಕವನ್ನ ಬಿಡುಗಡೆ ಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

26/07/2022 06:46 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ