ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

ಪ್ರಸಕ್ತ ಸಾಲಿನ ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರಕಟಿಸಿದರು. ಬೆಂಗಳೂರಿನ ಮಲ್ಲೇಶ್ವರಂನ ಸಿಇಟಿ ಕೇಂದ್ರ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022ರ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ 16-06-2022 ಮತ್ತು 17-06-2022 ರಂದು ಕರ್ನಾಟಕ ರಾಜ್ಯದಲ್ಲಿನ ಒಟ್ಟು 486 ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು 216559 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ 210829 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರಿಷ್ಕೃತ ಸರಿ ಉತ್ತರಗಳನ್ನು ಆಧರಿಸಿ (ವಿಷಯ ಪರಿಣಿತರು ತಯಾರಿಸಿದಂತೆ) ಮೆರಿಟ್‌ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮತ್ತು ಪರಿಷ್ಕೃತ ಸರಿ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ. ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ಇಂಜಿನಿಯರಿಂಗ್ ಕೋರ್ಸಿಗೆ 171656 ರ್ಯಾಂ ಕ್ ನೀಡಲಾಗಿದೆ. ಮುಂದುವರಿದು ಕೃಷಿ ಕೋರ್ಸಿಗೆ 139968 ಅಭ್ಯರ್ಥಿಗಳು, 142820 ಪಶುಸಂಗೋಪನೆ, 142750 ಯೋಗ ಮತ್ತು ನ್ಯಾಚುರೋಪತಿ ಮತ್ತು 174568 ಅಭ್ಯರ್ಥಿಗಳು ಬಿ. ಫಾರ್ಮ ಕೋರ್ಸಿಗೆ ಮತ್ತು ಫಾರ್ಮ್-ಡಿ ಕೋರ್ಸಿಗೆ ಅರ್ಹತೆಯನ್ನು ಪಡೆದಿರುತ್ತಾರೆ ಎಂದು ವಿವರಿಸಿದರು.

ಇಂದು ಬೆಳಿಗ್ಗೆ 11 ಗಂಟೆಗೆ ಪ್ರಾಧಿಕಾರದ ವೆಬ್‌ ಸೈಟ್ http://kea.kar.nic.in ಹಾಗೂ http://karresults.nic.in ಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಮೇಲ್ಕಂಡ ವೆಬ್‌ಸೈಟುಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಂಜಿನಿಯರಿಂಗ್ / ಪಶುಸಂಗೋಪನೆ / ಕೃಷಿ ವಿಜ್ಞಾನ / ಫಾರ್ಮಸಿ, ಯೋಗ ಮತ್ತು ನ್ಯಾಚುರೋಪತಿ/ ವೆಟರ್ನರಿ ಕೋರ್ಸುಗಳಲ್ಲಿ ಮೊದಲ 10 ರ‍್ಯಾಂಕ್ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಸಚಿವರು ಇದೇ ಸಂದರ್ಭ ಪ್ರಕಟಿಸಿದರು.

ವಿವಿಧ ಮೀಸಲಾತಿ ಪ್ರವರ್ಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಲಗತ್ತು ಪಟ್ಟಿಯಲ್ಲಿ ನೀಡಲಾಗಿದೆ. ರ‍್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇ-ಮೇಲ್ keauthority-ka@nic.in ಮೂಲಕ ಖುದ್ದಾಗಿ ಸಲ್ಲಿಸಿ ತಮ್ಮ ರ‍್ಯಾಂಕ್ ಗಳನ್ನು ಪಡೆಯಬಹುದಾಗಿದೆ.

ಇನ್ನು ಸಿಲಬಸ್ ವಿಚಾರದಲ್ಲಿಯೂ ಯಾವುದೇ ಗೊಂದಲ ಇರಲಿಲ್ಲ. ಉತ್ತಮ ಭವಿಷ್ಯವನ್ನು ನಿರೀಕ್ಷಿಸುತ್ತಿರುವ ವಿದ್ಯಾರ್ಥಿಗಳಿಗೆ ನಾವು ಸಕಾಲಕ್ಕೆ ಫಲಿತಾಂಶವನ್ನು ಪ್ರಕಟಿಸುವ ಪ್ರಯತ್ನ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಮುಕ್ತವಾದ ಅವಕಾಶವನ್ನು ನೀಡಿದ್ದು ಯಾವುದೇ ತಾರತಮ್ಯವನ್ನು ತೋರಿಸಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ವಾರ್ತಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ಅಧಿಕಾರಿ ರಮ್ಯಾ ಮತ್ತಿತರರು ಇದ್ದರು.

ರ‍್ಯಾಂಕ್ ಪಡೆದ ಮೊದಲ ಮೂವರ ವಿವರ

ಎಂಜಿನಿಯರಿಂಗ್:

ಅಪೂರ್ವ ಟಂಡನ್, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು

ಸಿದ್ದಾರ್ಥ ಸಿಂಗ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತಹಳ್ಳಿ, ಬೆಂಗಳೂರು

ಆತ್ಮುಕರಿ ವೆಂಕಟ ಮಾಧವನ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತಹಳ್ಳಿ, ಬೆಂಗಳೂರು

ಯೋಗ ವಿಜ್ಞಾನ

ಕೃಷಿಕೇಶ್ ನಾಗಭೂಷಣ, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್, ಬೆಂಗಳೂರು

ವೆಂಕಟೇಶ್ ವೀಣಾಧರ್ ಶೆಟ್ಟಿ, ಮಾಧವ ಕೃಪ ಇಂಗ್ಲಿಷ್ ಸ್ಕೂಲ್, ಮಣಿಪಾಲ್, ಉಡುಪಿ

ಕೃಷ್ಣ ಎಸ್. ಆರ್. ಚೈತನ್ಯ. ಟೆಕ್ನೋ ಸ್ಕೂಲ್, ಬೆಂಗಳೂರು

ಬಿ ಎಸ್ ಸಿ (ಕೃಷಿ)

ಅರ್ಜುನ್ ರವಿಶಂಕರ್, ಎಚ್ ಎಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು

ಸುಮಿತ್ ಎಸ್. ಪಾಟೀಲ್, ಚೈತನ್ಯ ಟೆಕ್ನೋ ಸ್ಕೂಲ್ ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು

ಸುದೀಪ್ ವೈ, ಎಂ, ವಿದ್ಯಾನಿಕೇತನ ಪಿಯು ಕಾಲೇಜ್, ತುಮಕೂರು

ವರದಿ- ಗಣೇಶ್ ಹೆಗಡೆ

Edited By :
PublicNext

PublicNext

30/07/2022 12:45 pm

Cinque Terre

25.74 K

Cinque Terre

0

ಸಂಬಂಧಿತ ಸುದ್ದಿ