ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸೌಲಭ್ಯಗಳು ಮತ್ತು ಅವಕಾಶಗಳು ಅತಿ ಹೆಚ್ಚು ಸಿಗುತ್ತವೆ. ಅದನ್ನ ಅವಕಾಶ ಪಡೆದು ಮುನ್ನುಗ್ಗಬೇಕು ಎಂದು ಕೆನರಾ ಬ್ಯಾಂಕ್ ಎಜಿಎಂ ಹರಿದಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಇಲ್ಲಿನ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಪೂರ್ವ ತಾಲೂಕು ಎಚ್ಎಎಲ್ ಸಮೀಪದ ವಿಭೂತಿ ನಗರದ ಸರ್ಕಾರಿ ಶಾಲೆಯಲ್ಲಿ ಇಂದು ಕೆನರಾ ಬ್ಯಾಂಕ್‌ನಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅದನ್ನು ಸದುಪಯೋಗ ಪಡೆದುಕೊಳ್ಳಿ. ಸಿಎಸ್ಆರ್ ಫಂಡ್ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಕೊಟ್ಟಿರೋದು ಖುಷಿ ತಂದಿದೆ ಎಂದರು.
ರಾಜ ಲಾಂಛನ ಸಂಸ್ಥೆಯ ಅಧ್ಯಕ್ಷ ಗಣೇಶ್ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುತ್ತಾರೆ, ದುಡಿಯುತ್ತಾರೆ. ಖಾಸಗಿ ಶಾಲೆಯ ಮಕ್ಕಳು ವಿದೇಶಿಗಳಿಗೆ ಹೋಗಿ ದುಡಿಯುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಸರ್ಕಾರದಿಂದ 2 ಲಕ್ಷ ಹಣ ಖರ್ಚು ಮಾಡುತ್ತಿದೆ. ಸರ್ಕಾರಿ ಶಾಲೆ ಅನ್ನೋದು ಅಸಡ್ಡೆ ಬೇಡ, ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ, ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಸ್ವಾಮಿ, ವಿಭೂತಿಪುರ ಕೆನರಾ ಬ್ಯಾಂಕ್ ಮ್ಯಾನೇಜರ್ ಸೋಮರಾಣಿ, ಸೀನಿಯರ್ ಮ್ಯಾನೇಜರ್ ಸುರೇಂದ್ರ ಸುಮಾನ್, ಸೀನಿಯರ್ ಮ್ಯಾನೇಜರ್ ಅಗ್ರಿಕಲ್ಚರ್ ಸೆಕ್ಷನ್ ಶಶಿಕಲಾ ಭಾಗವಹಿಸಿದ್ದರು.
PublicNext
24/08/2022 04:06 pm