ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಉದ್ಯೋಗವನ್ನು ಗಿಟ್ಟಿಸಿ ಶಿಕ್ಷಕ ವೃತ್ತಿಯನ್ನು ಮಾಡಬೇಕೆಂದಿರುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ 15 ಸಾವಿರ ಶಿಕ್ಷಕರನ್ನು ನೇಮಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಇದರೊಂದಿಗೆ ಟಿಇಟಿ ಪರೀಕ್ಷೆಯನ್ನು ನವೆಂಬರ್ 6ಕ್ಕೆ ನಡೆಯಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಟಿಇಟಿ( ಶಿಕ್ಷಕರ ಅರ್ಹತಾ ಪರೀಕ್ಷೆ)ಯು ನವೆಂಬರ್ 6ರಂದು ನಡೆಯಲಿದೆ ಎಂದು ಶಿಕ್ಷಣ ಸಚಿವರು ಮಾಹಿತಿಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ನಡೆಸುವ ನೇಮಕಾತಿಯ ವೇಳೆ ಸಿಇಟಿ ಪರೀಕ್ಷೆಯನ್ನು ನಡೆಸಲಿದೆ. ಸಿಇಟಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಟಿಇಟಿ ಎಂಬ ಪರೀಕ್ಷೆಯನ್ನು ಪ್ರಶಿಕ್ಷಣಾರ್ಥಿಗಳು ಉತ್ತೀರ್ಣರಾಗಿರಬೇಕು. ಅಂದರೆ ಟಿಇಟಿಯಲ್ಲಿ ಅರ್ಹತೆಯನ್ನು ಪಡೆದಿದ್ದರೆ ಮಾತ್ರವೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಅರ್ಹರಾಗಿರುತ್ತಾರೆ.
ಟಿಇಟಿಯನ್ನು ವರ್ಷಕ್ಕೆ ಎರಡು ಸಲ ಪರೀಕ್ಷೆಯನ್ನು ನಡೆಸಬೇಕು ಎಂಬ ಬೇಡಿಕೆಯಿತ್ತು. ಇದಕ್ಕಾಗಿ ಶಿಕ್ಷಣ ಸಚಿವರು ಅಸ್ತು ಎಂದಿದ್ದೂ ವರ್ಷಕ್ಕೆ ಎರಡು ಟಿಇಟಿ ಪರೀಕ್ಷೆ ನಡೆಸಬೇಕು ಎನ್ನುವ ಗುರಿ ಹೊಂದಿದ್ದಾರೆ. ಆದರೆ ಈ ವರ್ಷ ಮಾತ್ರವೇ ಒಂದು ಸಲ ಟಿಇಟಿ ನಡೆಯಲಿದೆ.
Kshetra Samachara
10/08/2022 07:56 pm