ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಾಸ್ಟೆಲ್ ಸ್ಥಳಾಂತರಿಸಲು ಮುಂದಾದ ಸರ್ಕಾರ: ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತ

ವರದಿ- ಗಣೇಶ್ ಹೆಗಡೆ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ದು ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಬೇರೆ - ಬೇರೆ ಕಡೆಗಳಲ್ಲಿ ಇರುವ ನಾಲ್ಕು ಹಾಸ್ಟೆಲ್ ಗಳನ್ನ ಯಲಹಂಕದ ಮುತಕನಹಳ್ಳಿಗೆ ಸ್ಥಳಾಂತರ ಮಾಡಿದ್ದು, ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ತೊಂದರೆ ಆಗುತ್ತಿದೆ.

ಹಿಂದುಳಿದ ವರ್ಗಗಳ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಸುಮ್ಮನಹಳ್ಳಿ, ಅಂಜನಾ ನಗರ, ಆರ್ ಟಿ ನಗರದಲ್ಲಿ ವಸತಿ ನಿಲಯವನ್ನು ನೀಡಿದೆ. ಕಳೆದ ಹಲವು ವರ್ಷಗಳಿಂದ 600 ಕ್ಕೂ ಹೆಚ್ಚು ವಾಸವಿರುವ ವಿದ್ಯಾರ್ಥಿಗಳು ಸಮೀಪ ಇರುವ ಇಂಜಿನಿಯರಿಂಗ್, ಮೆಡಿಕಲ್, ಲಾ, ಹಾಗೂ ವಿವಿಧ ಪದವಿ ತರಗತಿಗಳಿಗೆ ತೆರಳುತ್ತಾರೆ.

ಆದರೆ ಇದೀಗ ಯಲಹಂಕಕ್ಕೆ ವಸತಿ ನಿಲಯ ಸ್ಥಳಾಂತರ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು 40 ಕ್ಕೂ ಹೆಚ್ಚು ಕಿ.ಮೀ. ದೂರ ಕಾಲೇಜುಗಳಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಈ ಸಂಬಂಧ ಮೂರು ದಿನಗಳಿಂದ ತರಗತಿಗಳಿಗೆ ತೆರಳದೆ ವಿದ್ಯಾರ್ಥಿಗಳು ಧರಣಿ ಕೂಡಾ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

03/08/2022 09:43 pm

Cinque Terre

41.03 K

Cinque Terre

0

ಸಂಬಂಧಿತ ಸುದ್ದಿ