ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಸ್‌ಒ ಹುದ್ದೆಗಳಿಗಾಗಿ ಎಸ್‌ಡಿಎ ಹುದ್ದೆಗಳ ರದ್ದತಿಗೆ ಪಿಯು ಬೋರ್ಡ್ ನಿರ್ಧಾರ- ಸಿಬ್ಬಂದಿಯಿಂದ ತೀವ್ರ ಅಸಮಾಧಾನ

ವರದಿ - ಗಣೇಶ್ ಹೆಗಡೆ

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ 30 ಸೂಪರಿಂಟೆಂಡೆಂಟ್ ಹುದ್ದೆಗಳನ್ನು ಶಾಖಾಧಿಕಾರಿ (ಎಸ್‌ಒ) ಹುದ್ದೆಗಳಾಗಿ ಪರಿವರ್ತಿಸಲು, 61 ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿದೆ.

ಇಲಾಖೆಯ ಈ ನಡೆಗೆ ಬೋಧಕ ಮತ್ತು ಬೋಧಕೇತರ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಇಲಾಖೆಯ ಹಿಂದಿನ ನಿರ್ದೇಶಕರು 52 ಉಪನ್ಯಾಸಕ ಹುದ್ದೆಗಳನ್ನು ಅನುಪಯುಕ್ತ ಹುದ್ದೆಗಳೆಂದು ಗುರುತಿಸಿ, ಅವುಗಳಲ್ಲಿ 44 ಹುದ್ದೆಗಳನ್ನು ಎಸ್‌ಒ ಹುದ್ದೆಗಳನ್ನಾಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಈ ಪ್ರಸ್ತಾವನೆಯ ಕಾರಣ ಇಲಾಖೆಯ 30 ಜಿಲ್ಲಾ ಉಪನಿರ್ದೇಶಕರ ಕಚೇರಿಗಳಲ್ಲಿನ 30 ಸೂಪರಿಂಟೆಂಡೆಂಟ್‌ ಹುದ್ದೆಗಳನ್ನು 30 ಎಸ್‌ಒ ಹುದ್ದೆಗೆ ಕೆಲವು ಷರತ್ತುಗಳ ಮೇಲೆ ಉನ್ನತೀಕರಿಸಿ, ಜುಲೈ 6ರಂದು ಆದೇಶ ಹೊರಡಿಸಲಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಗೆ 956 (ಈ ಪೈಕಿ 546 ಹುದ್ದೆಗಳು ಖಾಲಿ ಇವೆ) ಎಸ್‌ಡಿಎ, 253 ಎಫ್‌ಡಿಎ (ಪ್ರಥಮ ದರ್ಜೆ ಸಹಾಯಕ), 60 ಸೂಪರಿಂಟೆಂಡೆಂಟ್‌ ಮತ್ತು 15 ಎಸ್‌ಒಹುದ್ದೆ ಮಂಜೂರಾಗಿದೆ. ಈ 60 ಸೂಪರಿಂಟೆಂಡೆಂಟ್‌ ಹುದ್ದೆಗಳಲ್ಲಿ‌ 30 ಹುದ್ದೆಗಳನ್ನು ಎಸ್‌ಒ ಹುದ್ದೆಗಳಾಗಿ ಪರಿವರ್ತಿಸಿ ಆದೇಶಿಸಲಾಗಿದೆ. ಇದರಿಂದಾಗಿ ಎಸ್‌ಒ ಹುದ್ದೆಗಳ ಸಂಖ್ಯೆ 15ರಿಂದ 45ಕ್ಕೆ ಏರಿಕೆ ಆಗಲಿದೆ. ಸೂಪರಿಂಟೆಂಡೆಂಟ್‌ ಹುದ್ದೆಗಳ ಸಂಖ್ಯೆ 30ಕ್ಕೆ ಇಳಿಯಲಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯ 30 ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ (ಮಂಗಳೂರು ಮತ್ತು ಕಲಬುರಗಿ ಹೊರತುಪಡಿಸಿ) 30 ಸೂಪರಿಂಟೆಂಡೆಂಟ್‌ (‌ವೇತನ ಶ್ರೇಣಿ ₹37,900– ₹70,850) ಹುದ್ದೆಗಳನ್ನು 30 ಶಾಖಾಧಿಕಾರಿ (ವೇತನ ಶ್ರೇಣಿ ₹43,100– ₹83,900) ಹುದ್ದೆಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಈ ಉದ್ದೇಶಕ್ಕೆ ಇಲಾಖೆಗೆ ಮಂಜೂರಾಗಿ ಖಾಲಿ ಇರುವ 61 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಗುರುತಿಸಿ ಕೂಡಲೇ ರದ್ದು ಮಾಡಬೇಕು. ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಉನ್ನತೀಕರಿಸಿದ ಶಾಖಾಧಿಕಾರಿಗಳನ್ನು ಸ್ಥಳಾಂತರ ಮಾಡಬಾರದು ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಶಾಖಾಧಿಕಾರಿ ಹುದ್ದೆಗಳಾಗಿ ಪರಿವರ್ತಿಸುವುದರಿಂದ ಉಂಟಾಗುವ ಆರ್ಥಿಕ ಹೊರೆ ಸರಿದೂಗಿಸಲು ಎಸ್‌ಡಿಎ ಹುದ್ದೆಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಇಲಾಖೆಯ ಸಿಬ್ಬಂದಿ ಆರೋಪಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

14/07/2022 06:59 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ