ದೇವನಹಳ್ಳಿ ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ 3 ಜನ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸಿಕೊಂಡು ಬಂದಿದ್ರು.. ಮೀಡಿಯಾ ಕ್ಯಾಮೆರಾ ಕಂಡು ಕೊಠಡಿಯಿಂದ ಹೊರಬಂದರು. ನಂತರ ಮಾಧ್ಯಮದವರನ್ನು ಕಂಡು ಮುಜುಗರಕ್ಕೆ ಒಳಗಾಗಿ ಮೂವರು ವಿದ್ಯಾರ್ಥಿನಿಯರಿಂದ ಪರೀಕ್ಷಾ ಕರ್ತವ್ಯಕ್ಕೆ ಹಾಜರಿದ್ದ ಶಿಕ್ಷಕಿಯರು ಹಿಜಾಬ್ ನ್ನು ತೆಗೆಸಿದ್ರು.
ಎಸ್ಎಸ್ಎಲ್ ಸಿ ಎಕ್ಸಾಂಗೆ ಹಿಜಾಬ್ ಧರಿಸಿಕೊಂಡು ಬಂದಿದ್ದಾಗ ಅವಕಾಶ ನೀಡಿದ್ದ ಪರೀಕ್ಷಾ ಸಿಬ್ಬಂದಿ, ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಕ್ಯಾಮರಾ ಕಾಣುತ್ತಿದ್ದಂತೆ, ಮೂವರ ಹಿಜಾಬ್ ತೆಗೆಸಿದ ಶಿಕ್ಷಕಿಯರು ಮತ್ತೆ ಪರೀಕ್ಷೆ ಬರೆಸಿದ್ದಾರೆ. ಇನ್ನು ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೆಲವು ಸಬೂಬುಗಳನ್ನು ನೀಡಿದ್ರು.
PublicNext
28/03/2022 05:16 pm