ಬೆಂಗಳೂರು : ಒಡೆಯನಿಲ್ಲದ ಮನೆಯಂತಾಗಿರುವ ಬೆಂಗಳೂರು ವಿವಿಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಿಸುತ್ತಿದೆ ಎನಿಸುತ್ತಿದೆ.
ಕುಲಪತಿ ಹುದ್ದೆ ಖಾಲಿಯಾಗಿ 10 ದಿನಗಳಾದ್ರೂ ಆ ಹುದ್ದೆಗೆ ಸಮರ್ಥರನ್ನು ನೇಮಕ ಮಾಡದೆ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿರುವ ಉಪನ್ಯಾಸಕರು ಇನ್ನೆರೆಡು ದಿನಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡದಿದ್ದರೆ ಯೂನಿವರ್ಸಿಟಿಯನ್ನೇ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರೊ.ಕೆ.ಆರ್. ವೇಣುಗೋಪಾಲ್ ಅವರನ್ನು ಕುಲಪತಿಗಳ ಹುದ್ದೆಯಿಂದ ಹೈ ಕೋರ್ಟ್ ಅನೂರ್ಜಿತಗೊಳಿಸಿ 10 ದಿನಗಳಾದ್ರೂ ವಿವಿಗೆ ಕುಲಪತಿಗಳ ನಿಯೋಜನೆಯಾಗಿಲ್ಲ. ಸದ್ಯ ಸರ್ಕಾರಕ್ಕಾಗಲಿ, ಉನ್ನತ ಶಿಕ್ಷಣ ಇಲಾಖೆಗಾಗಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕೆನ್ನುವ ಜವಾಬ್ದಾರಿ ಇದ್ದಂತಿಲ್ಲ. ಹಾಗೇನಾದ್ರೂ ಇದ್ದಿದ್ದರೆ ವೇಣುಗೋಪಾಲ್ ನಿರ್ಗಮನದ ಬೆನ್ನಲ್ಲೇ ಎಲ್ಲಾ ನೇಮಕಾತಿ ಪ್ರಕ್ರಿಯೆ ಮುಗಿದೋಗಿಬಿಡುತ್ತಿತ್ತು.ಆದರೆ ಸುಪ್ರಿಂ ಕೋರ್ಟ್ ನಲ್ಲಿ ಹಾಕಿರುವ ಮೇಲ್ಮನವಿಯನ್ನೇ ನಂಬಿಕೊಂಡು ಸರ್ಕಾರ ಕಾದು ಕುಳಿತ್ತಿದೆ.
Kshetra Samachara
26/03/2022 01:51 pm