ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆ.ವಿ.ವಿ ಯಲ್ಲಿ ಅಧಿಕಾರ ಹಸ್ತಾಂತರ ಸಂಘರ್ಷ

ಬೆಂಗಳೂರು : ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ-ಅಭ್ಯುದಯದಂಥ ವಿಚಾರಗಳಿಗೆ ಸುದ್ದಿಯಾಗಬೇಕಿದ್ದ ಬೆಂಗಳೂರು ವಿವಿ ಮತ್ತೊಂದು ಕೆಟ್ಟ ಕಾರಣಕ್ಕೆ ಸುದ್ದಿಯ ಲ್ಲಿದೆ. ಅಧಿಕಾರ ವಹಿಸಿಕೊಂಡ ಮೇಲೆ ಶೈಕ್ಷಣಿಕವಾಗಿ ಸಾಕಷ್ಟು ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದ ಕುಲಸಚಿವೆ(ADMIN) ಕೆ.ಜ್ಯೋತಿ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿರುವ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದೆ.

ನೂತನ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿರುವ ಪ್ರೊ.ಕೊಟ್ರೇಶ್, ಶಿಷ್ಟಾಚಾರ ಮೀರಿ ಜ್ಯೋತಿ ಅವರ ಅಧಿಕಾರ ವಹಿಸಿಕೊಳ್ಳೊಕ್ಕೆ ಮುಂದಾಗಿದ್ದಾರೆನ್ನುವ ಆರೋಪ ಕೋಲಾಹಲಕ್ಕೆ ಕಾರಣವಾಗಿದೆ.

ತಾವು ಅಧಿಕಾರ ವಹಿಸಿಕೊಳ್ಳೊಕ್ಕೆ ಬರುತ್ತಿರುವ ವಿಚಾರವನ್ನಾಗಲಿ,ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎನ್ನುವ ಸೂಕ್ಷ್ಮವನ್ನು ಕೊಡದೆ ಏಕಾಏಕಿ ದೌಡಾಯಿಸಿ ಶಿಷ್ಟಾಚಾರ ಮೀರಿ ಕುಲಸಚಿವ ಸ್ಥಾನ ಅಲಂಕರಿಸಲು ಪ್ರೊ,ಕೊಟ್ರೇಶ್ ಮುಂದಾಗಿದ್ದಾರೆನ್ನುವ ಸುದ್ದಿ ಚರ್ಚೆಯನ್ನು ಹುಟ್ಟಾಕಿದೆ. ಜ್ಯೋತಿ ಅವರು ಅಧಿಕಾರವನ್ನು ಹಸ್ತಾಂತರಿಸುವ ಮುನ್ನವೇ ತಾವೇ ಅಧಿಕಾರ ವಹಿಸಿಕೊಂಡು ಅಧಿಕಾರಿಗಳ ಸಭೆ ಕರೆಯುವಂಥ ಉದ್ದಟತನ ಪ್ರದರ್ಶಿಸಿದ್ದಾರೆನ್ನುವ ಆರೋಪಕ್ಕೆ ತುತ್ತಾಗಿದ್ದಾರೆ.

ಶಿಷ್ಟಾಚಾರದ ಪ್ರಕಾರ ಅಧಿಕಾರವನ್ನು ಹಸ್ತಾಂತರಿಸಿಕೊಂಡ ಮೇಲೆ ಸಭೆ ಕರೆಯಬೇಕಾಗುತ್ತದೆ.ಆದ್ರೆ ಕೊಟ್ರೇಶ್ ಆ ಕೆಲಸವನ್ನೇ ಮಾಡಿಲ್ಲ.ಇದು ಜ್ಯೋತಿ ಅವರನ್ನು ಕೆಂಡಾಮಂಡಲಗೊಳಿಸಿದೆ.

ಈ ಸಂಬಂಧ 02-12-2021 ರ ಸಂಜೆ 6.14ರ ಸುಮಾರಿಗೆ ನನ್ನ ಕಚೇರಿಗೆ ನಾನಿಲ್ಲದ ವೇಳೆಯಲ್ಲಿ ಆಗಮಿಸಿ ನನ್ನ ಸುಪರ್ದಿಯಲ್ಲಿದ್ದ ಕಡತಗಳು ಹಾಗೂ ಪತ್ರಗಳಿಗೆ ಸಹಿ ಹಾಕಿ ವ್ಯವಹರಿಸಿದ್ದಾರೆ.ಇದು ಸಿಸಿ ಟಿವಿ ದೃಶ್ಯಾವಳಿಯಲ್ಲೇ ಸೆರೆಯಾಗಿದೆ.ಇದನ್ನು ಪ್ರಶ್ನಿಸಲಾಗಿ ಕುಲಪತಿಗಳ ಮೌಖಿಕ ನಿರ್ದೇಶನದ ಮೇಲೆ ಹೀಗೆಲ್ಲಾ ನಡೆದುಕೊಂಡೆ ಎನ್ನುವುದಾಗಿ ಹೇಳಿದ್ದಾರೆ.ತನ್ನ ಅನುಪಸ್ಥಿತಿಯಲ್ಲಿ ಕಚೇರಿಗೆ ಆಗಮಿಸಿದ ಪ್ರೊ.ಕೊಟ್ರೇಶ್ ಹಾಗೂ ಅಂತದ್ದೊಂದು ಆದೇಶ ಕೊಟ್ಟ ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ 03-12-2021 ರಂದು ಕುಲಸಚಿವೆ ಕೆ.ಜ್ಯೋತಿ ದೂರು ಸಹ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/12/2021 11:27 am

Cinque Terre

1.61 K

Cinque Terre

0

ಸಂಬಂಧಿತ ಸುದ್ದಿ