ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸ್ ಪಾಸ್ ಅವಧಿ ವಿಸ್ತರಣೆಗೆ ವಿದ್ಯಾರ್ಥಿಗಳ ಒತ್ತಾಯ; ತಾರತಮ್ಯಕ್ಕೆ ಆಕ್ರೋಶ

ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಆಗಸ್ಟ್ 31ಕ್ಕೆ ಮುಕ್ತಾಯವಾಗಿದ್ದು, 2 ತಿಂಗಳು ಬಸ್ ಪಾಸ್ ಅವಧಿ ವಿಸ್ತರಣೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಆಗಸ್ಟ್ 31ಕ್ಕೆ ಮುಕ್ತಾಯವಾಗಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಹೊಸ ಬಸ್ ಪಾಸ್ ಪಡೆಯುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ತರಗತಿ ಮತ್ತು ಪರೀಕ್ಷೆ ನಡೆಯುತ್ತಿರುವ ಕಾರಣಕ್ಕೆ ಕೇವಲ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ 2 ತಿಂಗಳು ಬಸ್ ಪಾಸ್ ಅವಧಿ ವಿಸ್ತರಿಸಲಾಗಿದೆ. 2 ಮತ್ತು 4ನೇ ಸೆಮಿಸ್ಟರ್ ತರಗತಿ ಸಹ ನಡೆಯುತ್ತಿದ್ದು, ತಮಗೂ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಬೇಕೆಂದು ವಿದ್ಯಾರ್ಥಿಗಳ ಒತ್ತಾಯ.

ಬಸ್ ಪಾಸ್ ಗಾಗಿ ಅನ್ ಲೈನ್ ನಲ್ಲಿ ಅರ್ಜಿ ಹಾಕಲು ಹೋದ್ರೆ ಸೇವಾ ಸಿಂಧು ಪೋರ್ಟಲ್ ಅರ್ಜಿ ತಗೊಳ್ಳುತ್ತಿಲ್ಲ. ಇವತ್ತಿನಿಂದ ಕಾಲೇಜ್ ಗೆ ಹೋಗಲು ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿ ಪ್ರಯಾಣಿಸಬೇಕಿದೆ. ಬಡ ಕುಟುಂಬದ ವಿದ್ಯಾರ್ಥಿಗಳು ನಿತ್ಯ 200 ರೂ. ಪ್ರಯಾಣಕ್ಕೆ ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಇನ್ನೂ ಕಾಲೇಜ್ ಗೆ ಹೋಗಲು ಬಸ್ ಹಿಡಿಯ ಬೇಕಾದ್ರೆ ವಿದ್ಯಾರ್ಥಿಗಳು ಹರಸಾಹಸ ಪಡಬೇಕಾದ ಸ್ಥಿತಿ ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿದೆ. ಕಾಲೇಜ್ ಹೋಗುವ ಮತ್ತು ಕಾಲೇಜ್ ನಿಂದ ಬರುವ ಸಮಯದಲ್ಲಿ ಬಸ್ ಗಳ ಓಡಾಟವೇ ವಿರಳವಾಗಿದೆ. ಸಕಾಲಕ್ಕೆ ಬಸ್ ಸಿಗದೆ ತರಗತಿ ತಪ್ಪುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

Edited By :
PublicNext

PublicNext

01/09/2022 04:55 pm

Cinque Terre

26.72 K

Cinque Terre

0

ಸಂಬಂಧಿತ ಸುದ್ದಿ