ಬೆಂಗಳೂರು : ಶ್ರೀ ವೈಷ್ಣೋಮ ದೇವಿಯ ಜಯಂತಿ ರಥೋತ್ಸವ ಉತ್ಸವವನ್ನು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಬಳಿ 18ನೇ ಶ್ರೀ ವೈಷ್ಣೋಮ ಜಯಂತಿ ಮಹೋತ್ಸವ ಮೂರು ದಿನಗಳ ಕಾಲ ವಿಶೇಷ ಪೂಜಾ, ಸಮಾರಂಭ, ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ವೈಷ್ಣೋಮದೇವಿಯ ಉತ್ಸವ ಮೂರ್ತಿಯ ಜೊತೆಯಲ್ಲಿ ನೂರಾರು ಮಹಿಳೆಯರು ಕಳಸ ಹೊತ್ತು ಹೆಜ್ಜೆ ಹಾಕುತ್ತಾ ಪ್ರಮುಖ ರಾಜಬೀದಿಯಲ್ಲಿ ಸಾಗಿದರು. ಇನ್ನೂ ಭಾರತದ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ವೈಷ್ಣೋದೇವಿ ದೇವಸ್ಥಾನ ಕತ್ರಾದ ತ್ರಿಕುಟ ಬೆಟ್ಟದ ಮೇಲೆ 1700ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.
ಆದರೆ ವಯಸ್ಸಾದವರು,ಮಕ್ಕಳು ಅಲ್ಲಿ ಹೋಗಲು ಆಗಲ್ಲ ಎಂದು ಬೆಂಗಳೂರಿನಲ್ಲಿ ವೈಟ್ ಮಾರ್ಬಲ್ ನಿಂದ ಸಾಕ್ಷತ್ ವೈಷ್ಣೋದೇವಿಯ ಮೂರ್ತಿ ಸ್ಥಾಪಿಸಲಾಗಿತ್ತು. ಅಂದಹಾಗೆ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ವೈಷ್ಣೋದೇವಿ ದೇವಸ್ಥಾನ ವಾಗಿದ್ದು 18ವರ್ಷಗಳ ಹಿಂದೆ ಶ್ರೀ ವೈಷ್ಣೋ ದೇವಿಯ ಪ್ರತಿಷ್ಠಾಪಿಸಲಾಗಿತ್ತು. 18ನೇ ವೈಷ್ಣೋದೇವಿ ರಥೋತ್ಸವ ಮತ್ತು ಜಯಂತಿ ಪ್ರಯುಕ್ತವಾಗಿ ಇಂದು ಗಣಪತಿ ಪೂಜೆ,ಪುಣ್ಯಾಹ, ರಕ್ಷಾ ಬಂಧನ, ಕಲಶ ಸ್ಥಾಪನೆ, ನವಗ್ರಹ ,ಆಂಜನೇಯ ಮತ್ತು ಮಹಾಮೃತ್ಯುಂಜಯ ಹೋಮ ಮತ್ತು ಪಂಚರುದ್ರ, ಮಹಾಲಕ್ಷ್ಮೀ,ಕಾಲಭೈರವ, ಸುಬ್ರಮಣ್ಯ ಸ್ವಾಮಿ ಹೋಮ ಮತ್ತು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
26/08/2022 09:08 pm