ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳ್ ವಾರ್ಡ್ ನಲ್ಲಿ ಇಂದು ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉಲ್ಲಾಳ್ ವಾರ್ಡ್‌ನ 200 ಕ್ಕೂ ಹೆಚ್ಚು ಗರ್ಭಿಣಿಯರು ಪಾಲ್ಗೊಂಡಿದ್ದು, ಅರಿಶಿನ ಕುಂಕುಮ ಇಟ್ಟು, ಹೂ ಮುಡಿಸಿ ,ಬಳೆ ತೊಡಿಸಿ, ಹಣ್ಣುಗಳಿಂದ ಮಡಿಲನ್ನ ತುಂಬಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ವಾರ್ಡ್ ನಲ್ಲಿ ನೋಂದಾಯಿಸಿಕೊಂಡ ಅಷ್ಟು ಗರ್ಭಿಣಿಯರಿಗೆ ಬಾಗಿನವನ್ನ ಕೊಡಲಾಗಿದೆ.
ಕಾರ್ಯಕ್ರಮದಲ್ಲಿ ಸಹಾಕರ ಸಚಿವರು ಎಸ್.ಟಿ ಸೋಮಶೇಕರ್ ಪಾಲ್ಗೊಂಡು ಗರ್ಭಿಣಿಯರಿಗೆ ಸೀಮಂತದ ಕಿಟ್ ವಿತರಿಸಿ, ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಕಾರ್ಯಕ್ರಮ ಕುರಿತು ಮಾತನಾಡಿದ್ರು.
ಇನ್ನೂ ಈ ಸೀಮಂತ ಕಾರ್ಯಕ್ರಮದಲ್ಲಿ ಜಾತಿ ಭೇದವಿಲ್ಲದೆ ಎಲ್ಲ ಧರ್ಮದವರನ್ನ ಕರೆದು ಈ ಕಾರ್ಯಕ್ರಮ ಮಾಡಿರೋದು ಸಂತಸದ ವಿಷಯ. ಹಲವಾರು ಆಶಾ ಕಾರ್ಯಕರ್ತರುಗಳು, ಮಹಿಳಾ ಕಾರ್ಯಕರ್ತರುಗಳು ಸೇರಿ ಹೂ ಮುಡಿಸಿ ಆಶೀರ್ವಾದ ಮಾಡಲಾಯಿತು. ನಂತರ ಗರ್ಭಿಣಿಯರಿಗೆ ಬಗೆ-ಬಗೆಯ ಊಟ ಹಾಕಿಸಿ ಕಳಿಸಿಕೊಡಲಾಯಿತು.
PublicNext
08/07/2022 07:33 am