ದೇವನಹಳ್ಳಿ: ಜುಲೈ ಒಂದನ್ನು ಕಂದಾಯ ಇಲಾಖೆ ಕಂದಾಯದಿನಾಚರಣೆ ದಿನವನ್ನಾಗಿ ಆಚರಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಕಂದಾಯ ದಿನ ಮತ್ತು ಕಂದಾಯ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸುಮಾರು 477 ಜನ ಸಿಬ್ಬಂದಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೆಚ್ಚಿನ ಒತ್ತಡ ನಿರ್ವಹಣೆ ಮತ್ತು ಲವಲವಿಕೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ನೆರವಾಯ್ತು. ಅದರಲ್ಲೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಡು, ನೃತ್ಯಗಳು ನೆರೆದಿದ್ದ ನೂರಾರು ಜನರನ್ನು ರಂಜಿಸಿದವು. ಇನ್ನು ಕಂದಾಯ ಇಲಾಖೆಯಲ್ಲಿ ಖಾತೆ & ಸರ್ವೆ ವಿಭಾಗಕ್ಕೆ ಸಂಬಂಧಿಸಿ ನಿವೃತ್ತ ಜಿಲ್ಲಾಧಿಕಾರಿ ರಾಮಾಂಜಿನಪ್ಪ & ಸರ್ವೆ ಸೂಪರ್ ವೈಸರ್ ನಟರಾಜ್ ರವರ ಮಾಹಿತಿ ಆಧಾರಿತ ವಿಶ್ಲೇಷಣೆ ಅರ್ತಗರ್ಭಿತವಾಗಿತ್ತು.
ಇದೇ ವೇಳೆ ನಾಲ್ಕು ತಾಲೂಕುಗಳ ತಹಶಿಲ್ದಾರ್ & A.C.ಗಳು & ಸಿಬ್ಬಂದಿ ಕಾರ್ಯಾಗಾರಕ್ಕೆ ಸಾಕ್ಷಿಯಾಗಿದ್ದರು. ಇದೇ ವೇಳೆ ಮಾತನಾಡಿದ ದೊಡ್ಡಬಳ್ಳಾಪುರ A.C ತೇಜಸ್ ಕುಮಾರ್ ಈ ರೀತಿಯ ರಿಫ್ರೆಷ್ಮೆಂಟ್ ಕಾರ್ಯಕ್ರಮ ನಮ್ಮ ಸಿಬ್ಬಂದಿಗೆ ಅಗತ್ಯ ಎಂದರು.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್..
PublicNext
01/07/2022 08:29 pm