ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತುಳಿತಕ್ಕೊಳಗಾದ ಜನರ ಮೀಸಲಾತಿಗೆ ಶ್ರಮಿಸಿದ ಮಹಾನ್ ಚೇತನ ಜ್ಯೋತಿಬಾ ಫುಲೆ; ಕೆ.ಎಚ್‌.ಮುನಿಯಪ್ಪ

ಯಲಹಂಕ: ಭಾರತದ ಶಿಕ್ಷಣಕ್ಷೇತ್ರದ ಅಭಿವೃದ್ಧಿಗೆ ಬೆಂಬಲ ಸೂಚಿಸಿ ಪೇಶ್ವೆಗಳ ದುರಾಡಳಿತ ವಿರುದ್ಧ ಸಾಧನೆ ತೋರಿದ ಶ್ರೇಷ್ಠ ಚೇತನಗಳಲ್ಲಿ ಅಕ್ಷರದಾಸೋಹದ ಮಹಾನ್ ಸಾಧಕ ಜ್ಯೋತಿಬಾ ಫುಲೆ. ಮಹಾರಾಷ್ಟ್ರದಲ್ಲಿ ಹೆಂಡತಿ ಸಾವಿತ್ರಿಬಾ ಫುಲೆಗೆ ಶಿಕ್ಷಣ ಕಲಿಸಿ, ಶಿಕ್ಷಣ ಸಂಸ್ಥೆ ತೆರೆದು ಆ ಮೂಲಕ‌ ಅಮೂಲಾಗ್ರವಾಗಿ ದೇಶದಾದ್ಯಂತ ಎಲ್ಲಾ ಜನಾಂಗ ಶಿಕ್ಷಣ ಕಲಿಸಬೇಕೆಂಬ ಅಭಿಯಾನ ಶುರು ಮಾಡಿದ್ದವರು ಫುಲೆ. ತುಳಿತಕ್ಕೆ ಒಳಗಾದ ಎಲ್ಲಾ ಜನತೆಗೆ ಮೀಸಲಾತಿ ಹೋರಾಟ ಪ್ರಾರಂಭಿಸಿ ದೇಶದ ಶಿಕ್ಷಣ ಕ್ಷೇತ್ರದ ಬದಲಾವಣೆಗೆ ದುಡಿದವರು ಫುಲೆ ಅವರು ಎಂದು ಕೋಲಾರದ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.

ಇಂದು ಜ್ಯೋತಿಬಾ ಫುಲೆ ಅವರ ಜನ್ಮದಿನೋತ್ಸವ. ಬೆಂಗಳೂರು ಉತ್ತರ ಭಾಗ ಭೂಪಸಂದ್ರದ ಕೆ.ಹೆಚ್.‌ಪುನಿಯಪ್ಪ ಅವರ ಮನೆಯಲ್ಲಿ ಜ್ಯೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಮಹಾನಾಯಕ, ಛಲವಾದಿ, ದಲಿತ‌ ಮುಖಂಡರು ಹುಟ್ಟು ಹಬ್ಬಕ್ಕೆ ಸ್ಥಳದಲ್ಲಿ ಹಾಜರಿದ್ದು, ಪುಷ್ಪ ನಮನ ಸಲ್ಲಿಸಿದರು.

ತುಮಕೂರಿನ ಶ್ರೀ ಸಿದ್ದಗಂಗಾ ಶ್ರೀಗಳು ಅನ್ನದಾಸೋಹಕ್ಕೆ ನಾಂದಿ ಹಾಡಿದ್ದಂತೆ ಸ್ವಾತಂತ್ರ್ಯ ಪೂರ್ವದಲ್ಲಿ ಜ್ಯೋತಿಬಾ ಫುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇದು ಎಲ್ಲರೂ ಅಪ್ಪಿ-ತಬ್ಬಿ ಒಪ್ಪುವಂತಹ ಶ್ಲಾಘನೀಯದ ಕೆಲಸ..

-ಸುರೇಶ್‌ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ.

Edited By : Shivu K
Kshetra Samachara

Kshetra Samachara

12/04/2022 11:20 am

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ