ದೊಡ್ಡಬಳ್ಳಾಪುರ: ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಯುವ ಪೀಳಿಗೆಗೆ ಅಂಬೇಡ್ಕರ್ ಅವರ ಆದರ್ಶಗಳು ಹಾಗೂ ಸಂವಿಧಾನ, ಆಶಯಗಳನ್ನು ತಿಳಿಸುವ ಸಲುವಾಗಿ ಏಪ್ರಿಲ್ 9ಕ್ಕೆ ನಗರದ ಡಾ.ರಾಜಕುಮಾರ್ ಕಲಾ ಭವನದಲ್ಲಿ ಅಂಬೇಡ್ಕರ್ ಯೂತ್ ಬ್ರಿಗೇಡ್ ವತಿಯಿಂದ 'ಸರ್ವರಿಗೂ ಸಂವಿಧಾನ' ಎಂಬ ನಾಟಕ ಪ್ರದರ್ಶನ ಏರ್ಪಡಸಲಾಗಿದೆ ಎಂದು ಆರ್.ವಿ ಮಹೇಶ್ ಕುಮಾರ್ ತಿಳಿಸಿದ್ದಾರೆ.
ನಾಟಕವನ್ನು ರಂಗಾಯಣ ಶಿವಮೊಗ್ಗದ ಕಲಾವಿದರು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಕುರಿತ ನಾಟಕವನ್ನು 2 ಗಂಟೆಗಳ ಕಾಲ ಮನವರಿಕೆಯಾಗುವಂತೆ ಅಭಿನಯದ ಮೂಲಕ ತಿಳಿಸಲಿದ್ದಾರೆ ಎಂದರು.
ನಾಟಕದ
ರಚನೆ: ರಾಜಪ್ಪ ದಳವಾಯಿ, ನಿರ್ದೇಶನ; ಲಕ್ಷ್ಮಣ್,
ಸಹ ನಿರ್ದೇಶನ: ಸಂಧ್ಯಾ ಅರಕೆರೆ,
ಸಂಗೀತ ಸಂಯೋಜನೆ: ಶೋಧನ್, ಬಸ್ರೂರು, ಪೂರ್ವಿ ಕಲ್ಯಾಣಿ,
ರಂಗ ವಿನ್ಯಾಸ ಬೆಳಕು: ವಿನೀತ್ ಕುಮಾರ್ ಎಂ ಚಿಕ್ಕಮಗಳೂರು ವಹಿಸಿಕೊಂಡಿದ್ದಾರೆ.
Kshetra Samachara
06/04/2022 07:27 pm