ಬೆಂಗಳೂರು: ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಅನೇಕರು ಹೇಳುತ್ತಾರೆ. ಆದರೆ ಓದುಗರು ಹೆಚ್ಚಾಗಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.
ವಿಕ್ರಂ ಪ್ರಕಾಶನದ ವತಿಯಿಂದ ‘ಭಾನುವಾರ ಸೇವಾ ಸದನದಲ್ಲಿ ನಾಲ್ಕು ಪುಸ್ತಕ ಮತ್ತು ವೆಬ್ಸೈಟ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜನರು ಪುಸ್ತಕವನ್ನು ಓದುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಕಾರಣ ಇಂದು ಹೆಚ್ಚಾಗುತ್ತಿರುವ ಏಕಾಂಗಿತನ. ಈ ಸಮಸ್ಯೆಯಿಂದ ಹೊರಬರಲು ಪುಸ್ತಕದ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂದರೆ ಪುಸ್ತಕ ಮಳಿಗೆ ಮತ್ತು ವಿವಿ‘ ಆನ್ ಲೈನ್ ವೇದಿಕೆಗಳಲ್ಲಿ ಮಾರಾಟವಾಗುತ್ತಿರುವ ಪುಸ್ತಕಗಳ ಸಂಖ್ಯೆ ಎಂದು ಹೇಳಿದರು.
ನ್ಯಾಯಮೂರ್ತಿ ವಿ ಶ್ರೀಶಾನಂದ ಮಾತನಾಡಿ, ಸಮಾಜದಲ್ಲಿ ಆಗುವ ಅಪರಾಧಗಳು ಎಂದು ಕಡಿಮೆ ಆಗುತ್ತದೆಯೋ ಅಂದು ಜನರು ನೆಮ್ಮದಿಯಿಂದ ಬದುಕಬಹುದು.
ಅದಕ್ಕಾಗಿ ಉತ್ತಮ ಪುಸ್ತಕಗಳನ್ನು ಓದಬೇಕು. ಆಗ ಅವರಲ್ಲಿರುವ ಜ್ಞಾನದ ಅಂದತ್ವ ಮರೆಯಾಗಿ ಜೀವನದ ಕುರಿತಾದ ಸತ್ಯ ಸಂಗತಿಗಳು ತಿಳಿಯುತ್ತದೆ ಮತ್ತು ನಮ್ಮಲ್ಲಿರುವ ಅತಿಯಾದ ವ್ಯಾಮೋಹಕ್ಕೆ ಪೆರೆ ಬೀಳುತ್ತದೆ ಎಂದು ಹೇಳಿದರು.
ಡಾ. ಡಿ ವಿ ಗುರುಪ್ರಸಾದ್ ಅವರ ಅಪರಾಧಗಳ ಬೆನ್ನತ್ತಿ, ಡಾ. ವಿನೋದ ಜಿ ಕುಲಕರ್ಣಿ ಅವರ ತಲ್ಲಣಿಸದಿರು ಮನವೇ, ಡಾ. ನಾ ಸೋಮೇಶ್ವರ ಅವರ ನಮ್ಮ ಹೊಟ್ಟೆಯೊಳಗೊಂದು ಮೆದುಳು, ಪುಸ್ತಕ ಮತ್ತು ವೆಬ್ ಸೈಟ್ ಬಿಡುಗಡೆ ಮಾಡಲಾಯಿತು. ಸಚಿವ ಬಿ ಸಿ ನಾಗೇಶ್, ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ನ್ಯಾ. ವಿ. ಶ್ರೀಶಾನಂದ, ಅಂಕಣ ಬರಹಗಾರ ಸಂತೋಷ ಕುಮಾರ್ ಮೆಹೆಂದಳೆ,ಉಪಸ್ಥಿತರಿದ್ದರು.
Kshetra Samachara
04/04/2022 10:04 pm