ಆನೇಕಲ್: ಹಿರಿಯ ಚೇತನರಿಗೆ ಗೌರವ ಪ್ರೀತಿ ನೀಡಬೇಕಿರುವುದು ನಮ್ಮ ಆದ್ಯ ಕರ್ತವ್ಯ ಎಂದು ಸಮಂದೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೆನ್ನೇನ ಅಗ್ರಹಾರ ವೆಂಕಟೇಶ್ ತಿಳಿಸಿದರು.
ಅವರು ಪಟ್ಟಣದ ಶ್ರೀ ಮಲೆ ಮಹದೇಶ್ವರಸ್ವಾಮಿ ವೃದ್ಧಾಶ್ರಮದಲ್ಲಿ ಚೆನ್ನೇನ ಅಗ್ರಹಾರ ವೆಂಕಟೇಶ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವೃದ್ಧರಿಗೆ ಉಡುಗೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಇಂದಿನ ಕೆಲ ಕುಟುಂಬಸ್ಥರು ತಾವು ಮಾಡುವ ಶೋಕಿಗಾಗಿ ಹೆತ್ತ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ, ಇದ್ದಾಗ ಅವರ ಬೆಲೆ ಗೊತ್ತಾಗುವುದಿಲ್ಲ ಅದಕ್ಕೆ ಉದಾಹರಣೆ ನಾವು ನಮ್ಮ ಹೆತ್ತವರು ನಮ್ಮನ್ನು ಈ ಮಟ್ಟಕ್ಕೆ ತರಲು ಇರುತ್ತಾರೆ ಎಂಬುದು ಅವರು ಸತ್ತ ಮೇಲೆ ನಮಗೆ ತಿಳಿಯುವುದು ಆದಕಾರಣ ಇಂದಿನ ಯುವಜನತೆ ತಮ್ಮ ಹೆತ್ತವರನ್ನು ಪ್ರೀತಿಸಿ ಗೌರವಿಸಿ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
Kshetra Samachara
01/04/2022 07:58 pm