ಯಲಹಂಕ : ಯಲಹಂಕದ ಅಂಬೇಡ್ಕರ್ ಭವನದಲ್ಲಿಂದು ವಿಶ್ವಮಹಿಳಾ ದಿನಾಚರಣೆ ಜರುಗಿತು. ಈ ವೇಳೆ ಮಹಿಳೆಯರಿಗೆ ಆರೋಗ್ಯ ತಪಾಸಣೆ, ನೇತ್ರತಪಾಸಣೆ, ಮತ್ತು ಸರ್ವಾಂಗೀಣ ಆರೋಗ್ಯ ಸೇವೆಗೆ ವ್ಯವಸ್ಥೆ ಮಾಡಲಾಗಿತ್ತು.
ಯಲಹಂಕ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಮಹಿಳೆಯರು, ಮಕ್ಕಳು, ಯುವತಿಯರು, ವಯಸ್ಕ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಚಿತ್ರನಟಿ ತಾರಾ ಕಲಾತಂಡದ ಮಹಿಳೆಯರ ಜೊತೆ ಜೇನಿನಗೂಡು ನಾವೆಲ್ಲಾ ಬೇರೆಯಾದರೆ ಜೇನಿಲ್ಲ ಎಂಬ ಹಾಡಿಗೆ ಹೆಜ್ಜೆ ಹಾಕಿ ಜನರನ್ನು ರಂಜಿಸಿದರು.
ಮಹಿಳೆಯರ ಹಾಡು, ನವ ದುರ್ಗೆಯರ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ತಾರಾ ಮಾತನಾಡಿ ಒಂದು ದಿನವನ್ನಾದರೂ ಮಹಿಳೆಯರಿಗಾಗಿ ಮೀಸಲಿಡಬೇಕೆಂದರು. ಇನ್ನು ಯಲಹಂಕದ ಸಿಂಗನಾಯಕನಹಳ್ಳಿ ರೈತರ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ಮಾತನಾಡಿ ಕೊರೊನಾ ಸಂಕಷ್ಟದಲ್ಲಿ ಈ ರೀತಿ ಮಹಿಳಾದಿನಾಚರಣೆ ಅವಶ್ಯಕ ಎಂದರು.
PublicNext
08/03/2022 11:02 pm