ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼರಂಗೋಲಿ ಕಲಾ ತಪಸ್ವಿʼ ಈ ಸಾವಿತ್ರಮ್ಮ; ಅಂಗಣದಲ್ಲಿ ಜೀವಕಳೆ ಅನಾವರಣ!

ಬೆಂಗಳೂರು: ಜಾನಪದ ಕಲೆಗಳಲ್ಲಿ ರಂಗೋಲಿಯೂ ಒಂದು. ಆಧುನಿಕತೆಯ ಹೈಟೆಕ್ ಆಂಡ್ರಾಯ್ಡ್ ಕಾಲಘಟ್ಟದಲ್ಲಿಯೂ ರಂಗೋಲಿ ಕಲಾಕಾರರು ಇದ್ದಾರೆ ಎನ್ನುವುದೇ ಖುಷಿಯ ವಿಷಯ. ಅವರಲ್ಲಿ ಒಬ್ಬರು ಬೆಂಗಳೂರಿನ ಸಾವಿತ್ರಮ್ಮ. ಅವರು ಅತ್ಯದ್ಭುತವಾಗಿ ಬಿಡಿಸುವ ರಂಗುರಂಗಿನ ರಂಗೋಲಿ ಕಣ್ಮನ‌ ಸೆಳೆಯುತ್ತವೆ. ಅದು ಎಲ್ಲಿ ಎಂಬ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼನ ವಿಶೇಷ ವರದಿ ನಿಮ್ಮ ಮುಂದೆ...

ಚಿತ್ರ, ಬಿಂದು, ಬಣ್ಣದ ಸಮಾಗಮವೇ ರಂಗೋಲಿ. ಹೆಣ್ಣುಮಕ್ಕಳ ಕಲಾ ನೈಪುಣ್ಯ, ಕಲ್ಪನಾಶಕ್ತಿಯ ಚಿತ್ರ- ಚಿತ್ತಾರವೇ ರಂಗೋಲಿ. ಈ ಕಲೆಗೆ ಮತ್ತಷ್ಟು ಜೀವಕಳೆ ತುಂಬುತ್ತಿದ್ದಾರೆ ಹೆಣ್ಣೂರು ವಾಸಿ 60ರ ಹರೆಯದ ಸಾವಿತ್ರಮ್ಮ. ತಪಸ್ವಿಯಂತೆ ರಂಗೋಲಿ ಬಿಡಿಸುವುದನ್ನೇ ಭಕ್ತಿಯ ಅಭಿವ್ಯಕ್ತಿ ಎಂದು ಭಾವಿಸಿದ್ದಾರೆ. ತಾವೇ ಮನೆಯಲ್ಲಿ ತಯಾರಿಸಿದ ಬಣ್ಣಗಳಿಂದ ಬಿಡಿಸುವ ರಂಗೋಲಿ ಹೆಣ್ಣೂರು ಸುತ್ತಮುತ್ತ Talk of the Town ಎಂಬಂತಾಗಿದೆ.

ಕಳೆದ 30 ವರ್ಷಗಳಿಂದ ಸಾವಿತ್ರಮ್ಮ ಹೆಣ್ಣೂರಿನ ಶ್ರೀ ಶನೇಶ್ವರ, ಶ್ರೀ ಆಂಜನೇಯ, ಬ್ರಹ್ಮಕುಮಾರಿ ಆಶ್ರಮ, ಶಿವ, ಗಣೇಶ ದೇವಾಲಯ ಮುಂಭಾಗ ಮುಂಜಾನೆ 4ರಿಂದ ಬೆಳಗ್ಗೆ 7ರ ವರೆಗೂ ರಂಗೋಲಿ ಬಿಡಿಸುತ್ತಾರೆ. ಒಂದೊಂದು ರಂಗೋಲಿ ರಚಿಸಲು ಕಡಿಮೆ ಎಂದರೂ 2, 3, 4 ಗಂಟೆ ತೆಗೆದುಕೊಳ್ತಾರೆ. ಕಾಸಿಗೆ ರಂಗೋಲಿ ಬಿಡಿಸಲ್ಲ. ಪ್ರೀತಿ- ಭಕ್ತಿಯಿಂದ ಕೇಳಿಕೊಂಡರೆ ಬಂದು ರಂಗೋಲಿ ಬಿಡಿಸುತ್ತಾರೆ. ಸಾವಿತ್ರಮ್ಮ ಬಿಡಿಸುವ ಚಕ್ರ, ಶ್ರೀಚಕ್ರ, ಕಳಶ, ತುಳಸಿಕಟ್ಟೆ, ಪುಷ್ಪ, ಪದ್ಮಪುಷ್ಪ, ರಥ, ಬ್ರಹ್ಮರಥ, ಶಿವಲಿಂಗ ರಂಗೋಲಿಗಳನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ.

Edited By : Shivu K
PublicNext

PublicNext

25/02/2022 09:58 am

Cinque Terre

39.63 K

Cinque Terre

0