ದೊಡ್ಡಬಳ್ಳಾಪುರ : ಘಾಟಿ ಸುಬ್ರಮಣ್ಯ ಕ್ಷೇತ್ರದ ಫೆ. ತಿಂಗಳ ಭಕ್ತರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು 56, 64, 318 ಸಂಗ್ರಹವಾಗಿದೆ.
ಕರ್ನಾಟಕದ ಪ್ರಮುಖ ಆರಾಧನಾ ಕ್ಷೇತ್ರ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ, ಶ್ರೀಕ್ಷೇತದ ಸುಬ್ರಮಣ್ಯ ಸ್ವಾಮಿ ಮತ್ತು ನರಸಿಂಹಸ್ವಾಮಿ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆ ಯಿಂದ ಭಕ್ತರು ಬರುತ್ತಾರೆ, ಹಾಗೆಯೇ ಸರ್ವ ದೋಷ ನಿವಾರಣೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನಲೆ ಭಕ್ತರ ಹುಂಡಿ ಹಣ ಸಹ ಹೆಚ್ಚಾಗಿಯೇ ಸಂಗ್ರಹವಾಗಿದೆ.
ಇನ್ನು ಹುಂಡಿ ಹಣ ಎಣಿಕೆಯಲ್ಲಿ ಭಕ್ತರು ಸಹ ಪಾಲ್ಗೊಂಡಿದ್ದರು, 56, 64,318 ರೂಪಾಯಿ ಸಂಗ್ರಹವಾಗಿದೆ, 13, 600 ರೂಪಾಯಿ ಮೌಲ್ಯದ 3 ಗ್ರಾಂ 400 ಮಿಲಿ ಚಿನ್ನ, 77, 500 ರೂಪಾಯಿ ಮೌಲ್ಯದ 2 ಕೆ.ಜಿ. 50 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ನಾಗರಾಜ್, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಹೇಮಾವತಿ, ದೇವಸ್ಥಾನದ ಪ್ರಧಾನ ಆರ್ಚಕ ಸುಬ್ರಮಣ್ಯಸ್ವಾಮಿ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
Kshetra Samachara
21/02/2022 07:47 pm