ಆನೇಕಲ್ : ಅದು ಇತಿಹಾಸ ಪ್ರಸಿದ್ಧ ಕಲ್ಯಾಣಿ ರಾಜಮಹಾರಾಜರುಗಳು ವಿಹಾರಕ್ಕೆ ಬರುತ್ತಿದ್ದ ಜಾಗ ಆದರೆ ಈಗಿನ ಪರಿಸ್ಥಿತಿ ನೋಡಿದರೆ ನಿಜಕ್ಕೂ ಶೋಚನೀಯ ಅಂತಹ ಜಾಗದಲ್ಲಿ ಗಿಡ-ಗಂಟೆಗಳು ಬೆಳೆದಿದ್ದು ಸದ್ಯ ಕಲ್ಯಾಣಿ ಸ್ವಚ್ಛತೆ ಕಾರ್ಯ ಮಾಡಲಾಯಿತು.
ಆನೇಕಲ್ ಪುರಸಭೆ ಅಧಿಕಾರಿಗಳು, ಗಮನ ಮಹಿಳಾ ಸಂಸ್ಥೆ ,ರೋಟರಿ ಬೆಂಗಳೂರು ಸಹಯೋಗ ದಲ್ಲಿ ಬೆಳ್ಳಂಬೆಳಗ್ಗೆ ಆನೇಕಲ್ ಕಲ್ಯಾಣಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆನೇಕಲ್ ಪಟ್ಟಣದ ಸಂತೆ ಬೀದಿ ಪಂಪ್ ಹೌಸ್ ಬಳಿ ಇರುವ ಕಲ್ಯಾಣಿ ಜಾಗವನ್ನು ಗಿಡ ಗೆಂಟೆಗಳನ್ನು ಹೊಡೆದು ತೆರವು ಮಾಡುವುದರ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
Kshetra Samachara
13/02/2022 03:05 pm