ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಸವಿತಾ ಮಹರ್ಷಿ ಜಯಂತಿ ಸರಳವಾಗಿ ಆಚರಣೆ

ವರದಿ - ಹರೀಶ್ ಗೌತಮನಂದ

ಆನೇಕಲ್ ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ಇಂದು ಸವಿತಾ ಮಹರ್ಷಿ ಜಯಂತಿ ಯನ್ನು ಸವಿತಾ ಸಮಾಜ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು ಕೋವಿಡ್ ಕಾರಣದಿಂದಾಗಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ಆಚರಣೆ ಮಾಡಲಾಯಿತು ಇನ್ನು ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಲಾಯಿತು

ಇನ್ನು ಈ ದೇಶ ಕಂಡ ಮಹಾನ್ ದಾರ್ಶನಿಕರ ಪೈಕಿ ಶ್ರೀ ಸವಿತಾ ಮಹರ್ಷಿಗಳು ಒಬ್ಬರಾಗಿದ್ದರು ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು ಆನೇಕಲ್ ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು

ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಾಗವೇಣಿಯವರು ಸವಿತಾ ಸಮಾಜದ ಬಗ್ಗೆ ಜನರಿಗೆ ಅರಿವಿಲ್ಲ ಶಿವನ ಕಣ್ಣಿನ ಅಂಶದಿಂದ ಹುಟ್ಟಿದವರು, ದೈವ ಸಂಭೂತರು, ನಾಲ್ಕು ವೇದಗಳ ಪೈಕಿ ಸಾಮವೇದದ ಸಂಸ್ಥಾಪಕರು ಹೀಗಾಗಿ ಎಲ್ಲ ಜನಾಂಗದ ನಾಯಕರು ಇವರನ್ನು ಸ್ಮರಣೆ ಮಾಡಬೇಕು ಅಂತ ಜನರಿಗೆ ಸಂದೇಶ ನೀಡಿದರು ಮತ್ತೊಬ್ಬ ಸವಿತಾ ಸಮಾಜ ಅಧ್ಯಕ್ಷರು ವರದರಾಜ್ ಮಾತನಾಡಿ ಸಂಧ್ಯಾವಂದನೆ ಗಾಯತ್ರಿ ಮಂತ್ರ ಸೇರಿದಂತೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದವರು ಆದರೆ ನಮ್ಮ ಜನಾಂಗದ ಜನರನ್ನು ತುಳಿತಕ್ಕೆ ಒಳಪಟ್ಟಿದ್ದಾರೆ ಹೀಗಾಗಿ ಸರ್ಕಾರ ನಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

08/02/2022 09:20 pm

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ