ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: "ಪ್ರಪಂಚದಲ್ಲೆ ಅತ್ಯುತ್ತಮ ಸಂವಿಧಾನ ಡಾ.ಅಂಬೇಡ್ಕರ್ ರಿಂದ ಸಾಧ್ಯವಾಯ್ತು"

ಯಲಹಂಕ: ಶೋಷಿತರ, ದೀನ-ದಲಿತರ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತಾಗಲು ಸಾಧ್ಯವಾಗಿದ್ದು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ. ಪ್ರಪಂಚದ ವಿವಿಧ ಸಂವಿಧಾನಗಳ ಅಧ್ಯಯನ ನಡೆಸಿದ ಅಂಬೇಡ್ಕರ್, ಸಮಾಜದ ಪ್ರತಿಯೊಬ್ಬರೂ ಅಪ್ಪಿ, ಒಪ್ಪಿ ತಬ್ಬಿಕೊಳ್ಳುವಂತಹ ಸಂವಿಧಾನ ರಚಿಸಿದರು. ಆದ್ದರಿಂದಲೇ ನಾನು ಶಾಸಕನಾಗಿ ನಿಮ್ಮ ಮುಂದೆ ನಿಂತು ಮಾತನಾಡಲು ಸಾಧ್ಯವಾಗಿದೆ ಎಂದು ಶಾಸಕ ಎಸ್.ಆರ್.‌ ವಿಶ್ವನಾಥ್‌ ಹೇಳಿದರು.

ಇದೀಗ ಕೊರೊನಾ ಲಾಕ್ಡೌನ್ 3ನೇ ಅಲೆ ಆತಂಕದಲ್ಲಿ ಯಲಹಂಕದ ಹೊಯ್ಸಳ ಮೈದಾನದಲ್ಲಿ ನಿಗದಿತ ನಾಲ್ಕು ಮಂದಿ ಶಾಲಾ ಮಕ್ಕಳಿಂದ ಮಾತ್ರ ಸರಳ ಪಥ ಸಂಚಲನ ನೆರವೇರಿತು. ಯಲಹಂಕ ತಾಲೂಕು ಆಡಳಿತ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ತಕರ್ತರು, ಈಶಾನ್ಯ ವಿಭಾಗದ ಪೊಲೀಸರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

26/01/2022 07:52 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ