ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: 73 ನೇ ಗಣರಾಜ್ಯೋತ್ಸವ ಸರಳವಾಗಿ ಆಚರಣೆ

ಆನೇಕಲ್: 73 ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಆನೇಕಲ್ ಹೃದಯಭಾಗದ ಎಎಸ್ ಬಿ ಆಟದ ಮೈದಾನ ಆವರಣದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.. ಆನೇಕಲ್ ತಾಲೂಕಿನ ತಹಶಿಲ್ದಾರ್ ದಿನೇಶ್ ನೇತೃತ್ವದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.. ಇನ್ನು ಗಣರಾಜ್ಯೋತ್ಸವ ಆಚರಣೆಯನ್ನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿತ್ತು .

ಗಣರಾಜ್ಯೋತ್ಸವದ ಸಂದೇಶವನ್ನು ತಹಶಿಲ್ದಾರ್ ದಿನೇಶ್ ತಿಳಿಸಿದರು.

ಜೊತೆಗೆ ಸಂವಿಧಾನ ಸಮರ್ಪಣಾ ದಿನ ವನ್ನು ಸ್ಮರಿಸುವ ಮೂಲಕ ಜನರಿಗೆ ತಿಳಿಸಿದರು ಇನ್ನು ಕಾರ್ಯಕ್ರಮದಲ್ಲಿ ಆನೇಕಲ್ ಶಾಸಕ ಬಿ ಶಿವಣ್ಣ ಪುರಸಭೆ ಅಧ್ಯಕ್ಷ ಪದ್ಮನಾಭ್ ಆನೇಕಲ್ ತಹಶಿಲ್ದಾರ್ ದಿನೇಶ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.ಕೋವಿಡ್ ಕಾರಣದಿಂದಾಗಿ ಅಂತರ ಕಾಯ್ದು ಸರಳವಾಗಿ ಆಚರಣೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

26/01/2022 03:40 pm

Cinque Terre

656

Cinque Terre

0

ಸಂಬಂಧಿತ ಸುದ್ದಿ