This is a modal window.
Beginning of dialog window. Escape will cancel and close the window.
End of dialog window.
ಆನೇಕಲ್: ಕ್ರಾಂತಿಕಾರಿ ಹೋರಾಟಗಾರ್ತಿ ಶ್ವೇತಾ ಭೀಮಪುತ್ರಿ ನೆನ್ನೆ ಅನಾರೋಗ್ಯದಿಂದ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ವತಿಯಿಂದ ಮೇಣದಬತ್ತಿ ಬೆಳಗಿ, ಪುಷ್ಪ ನಮನ ಸಲ್ಲಿಸಲಾಯಿತು.
ಆನೇಕಲ್ ತಾಲೂಕಿನ ಅಂಬೇಡ್ಕರ್ ಪುತ್ಥಳಿ ಎದುರು ಶ್ವೇತಾ ಭೀಮಪುತ್ರಿ ಅವರ ಭಾವಚಿತ್ರದೆದುರು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು. ನೆರಳೂರು ಗ್ರಾಪಂ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರ ಆಗಿ ಸಂಕಷ್ಟ, ಬಡತನದಲ್ಲಿ ಶಿಕ್ಷಣ ಪಡೆದರು. ಸಮಾಜದ ಒಳಿತಿಗಾಗಿ ಹೋರಾಟ ಮಾಡಿ, ಚಿಕ್ಕವಯಸ್ಸಿನಲ್ಲೇ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಎಂದು ನುಡಿ ನಮನ ಸಲ್ಲಿಸಿದರು. ವಕೀಲ ಆನಂದ್ ಚಕ್ರವರ್ತಿ, ನಾಗರಾಜ್ ಮೌರ್ಯ, ನಂದಕುಮಾರ್, ಗೋವಿಂದ ಮೌರ್ಯ ಉಪಸ್ಥಿತರಿದ್ದರು.
Kshetra Samachara
22/01/2022 09:43 pm