ದೇವನಹಳ್ಳಿ: ಸ್ಬಾಮಿ ವಿವೇಕಾನಂದರ 159ನೇ ಜಯಂತಿ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತವು ಜಿಲ್ಲಾ ಯುವಜನ ಮೇಳ ಆಯೋಜಿಸಿತ್ತು. ಸಚಿವ ಎಂಟಿಬಿ ನಾಗರಾಜ್, ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಟ ಅರ್ಪಿಸಿ, ಜಯಂತ್ಯುತ್ಸವಕ್ಕೆ ಶುಭ ಕೋರಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲಗಳ ತಾಲೂಕು ಸೇರಿದಂತೆ ಜಿಲ್ಲೆಯ ಸೀಮಿತ ಸಂಖ್ಯೆಯ ಅಧಿಕಾರಿಗಳು, ಸಿಬ್ಬಂದಿ, ಮಕ್ಕಳು ಭಾಗವಹಿಸಿದ್ದರು. ಯುವಕ-ಯುವತಿಯರಿಗೆ ಯೋಗಾಸನ, ಆಶುಭಾಷಣ, ಕೀರ್ತನೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ವೈಯಕ್ತಿಕ- ಗುಂಪು ಸ್ಪರ್ಧೆಗಳಲ್ಲಿ ಯೋಗಾಸನದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.
ಬೆಂಗಳೂರು ಗ್ರಾಮಾಂತರ ಜಿಪಂ CEO ಕೆ.ರೇವಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಆರಾಧ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಸೇರಿದಂತೆ ಜಿಲ್ಲೆಯ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಯುವ ಕಲಾವಿದರು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.
Kshetra Samachara
12/01/2022 06:12 pm