ಯಲಹಂಕ: ಇಂದು ಯಲಹಂಕದ ರೇವಾ ಯುನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೌಂಡರ್ಸ್ ಡೇ ಪ್ರಯುಕ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಚಿತ್ರರಂಗದ ಸಾಧಕ ಪ್ರೇಮಲೋಕದ ಕನಸುಗಾರ ರವಿಚಂದ್ರನ್ ಹಾಗೂ DRDO ವಿಜ್ಞಾನಿ, ಅಗ್ನಿ ಕ್ಷಿಪಣಿ ವಿಜ್ಞಾನ ಕ್ಷೇತ್ರ ಸಾಧಕಿ ಟೆಸ್ಸಿ ಥಾಮಸ್ ಅವರಿಗೆ ಜೀವಮಾನ ರೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೇವಾ ಕಾಲೇಜಿನ ಸ್ಥಾಪಕ ಡಾ.ಶ್ಯಾಮರಾಜು ಅವರಿಂದ ರಾಜ್ಯ, ದೇಶದ ನಾನಾ ಕ್ಷೇತ್ರ ಸಾಧಕರಿಗೆ ಫೌಂಡರ್ಸ್ ಡೇ ಪ್ರಯುಕ್ತ ಈ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಂಬಾರರ ʼಸಂಗ್ಯಾ ಬಾಳ್ಯʼ ನಾಟಕ ಪ್ರದರ್ಶನ ನಡೆಯಿತು. ಹಾಗೆಯೇ ರವಿಚಂದ್ರನ್ ಅವರ ಜೀವಮಾನದ ಸಾಧನೆ ಪ್ರತಿಬಿಂಭಿಸುವ ಹಾಡುಗಳ ತುಣುಕು ನೆರೆದಿದ್ದ ವಿದ್ಯಾರ್ಥಿಗಳನ್ನು ಸಖತ್ತಾಗಿ ರಂಜಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂಬಾರರು, ರೇವಾ ಕಾಲೇಜಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಭಿನ್ನ ಭಿನ್ನವಾದ ಆದರ್ಶ- ಗುರಿ ಹೊಂದಿದವ ಬೇರೆ ವಿವಿಗಳಿಗಿಂತ ಭಿನ್ನವಾಗಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ಏನು ಗೊತ್ತಿಲ್ಲದಿದ್ದಾಗ ಗೆಲುವು ಸಿಕ್ಕಿತ್ತು. ಈಗ ಎಲ್ಲ ಗೊತ್ತಿದ್ದಾಗ ಸೋಲಾಗುತ್ತಿದೆ.
ಜೀವನದಲ್ಲಿ ಲೆಕ್ಕಾಚಾರ ಬಂದಾಗ ಸಕ್ಸಸ್ ಸಿಗಲಿಲ್ಲ. ನಿಮ್ಮ ಕೆಲಸ ನೀವು ಮಾಡಿ ವಿದ್ಯಾರ್ಥಿಗಳೇ, ರಿಸಲ್ಟ್ ತಾನಾಗೇ ಬರುತ್ತದೆ. ಓದುವ ಟೈಮಲ್ಲಿ ಚೆನ್ನಾಗಿ ಓದಿದರೆ ಜೀವನ ಪೂರ್ತಿ ಆಟ ಆಡಬಹುದು. ಓದುವಾಗ ಆಟ ಆಡಿದರೆ ಜೀವನಪೂರ್ತಿ ನಮ್ಮನ್ನು ಆಟ ಆಡಿಸುತ್ತದೆ. ಗೆಲ್ಲುವುದಕ್ಕೆ ನಗು ಮುಖ್ಯ, ಸದಾ ನಗುತ್ತಿರಿ ಎಂದು ರವಿಚಂದ್ರನ್ ಮಾತು ಸಿನಿಮಾ ರೀತಿಯಲ್ಲೇ ಇದ್ದು, ಕ್ಯಾಂಪಸ್ ನಲ್ಲಿ ಭಾರಿ ಕರತಾಡನ, ಚಪ್ಪಾಳೆ ಗಿಟ್ಟಿಸಿತು.
Kshetra Samachara
07/01/2022 10:43 am