ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಒಕ್ಕಲಿಗರ ಸಂಘದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ನೆಲಮಂಗಲ: ನೆಲಮಂಗಲ ತಾಲ್ಲೂಕು ಒಕ್ಕಲಿಗರ ಸಂಘದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಂಘಕ್ಕೆ ಸೇರ್ಪಡೆ ಮಾಡಲು ಕರೆ ನೀಡಿದ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಹೊರವಲಯದ ಬಸವನಹಳ್ಳಿ ಬಳಿಯ ಶ್ರೀ‌ ಶಿವಾನಂದ ಆಶ್ರಮದಲ್ಲಿ ನಡೆಯಿತು.

ಶಿವಾನಂದ ಆಶ್ರಮದ ಪರಮ ಪೂಜ್ಯ ಪೀಠಾಧ್ಯಕ್ಷರು ಶ್ರೀ ರಮಾಣನಂದ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಹಾಗೂ ನೆಲಮಂಗಲ ಒಕ್ಕಲಿಗರ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಜನರ ವಿವಿಧ ಸಮಸ್ಯೆಗಳ, ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಮುದಾಯಕ್ಕೆ ತನ್ನದೇ ಆದ ಸಮುದಾಯ ಭವನದ ಬಗ್ಗೆ ಚರ್ಚೆ ಮಾಡಲಾಯಿತು. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಂಘಕ್ಕೆ ನೋಂದಣಿ ಮಾಡಿಸಿ ಸೇರ್ಪಡೆ ಮಾಡಿಕೊಳ್ಳಬೇಕು ತಾಲ್ಲೂಕಿನಲ್ಲಿ ತಮ್ಮ ಸಮುದಾಯವೇ ಅತ್ಯಂತ ನಿರ್ಣಾಯಕ ಹಂತದಲ್ಲಿ ಇದೆ ಆದ್ರೆ ತಾವು ಇನ್ನೂ ಅಭಿವೃದ್ಧಿ ಮಟ್ಟದಿಂದ ದೂರವಿದ್ದೇವೆ ಸಮಾಜದಲ್ಲಿ ಎಲ್ಲಾ ಸಮುದಾಯದವರಂತೆ ನಮಗೂ ಹಲವು ಸೌಲಭ್ಯಗಳು ದೊರೆಯುವಂತೆ ಆಗಬೇಕು. ಪ್ರತಿಯೊಬ್ಬರೂ ಒಕ್ಕಲಿಗರ ಸಂಘ, ಸಾಹಿತ್ಯ ಪರಿಷತ್ತುಗಳಿಗೆ ನೊಂದಣೆಯಾಗಬೇಕು ಅದರ ಜೊತೆಗೆ ಕರೋನಾ ರೂಪಾಂತರ ಒಮಿಕ್ರಾನ್ ವೈರಸ್ ನಿಂದ ಎಲ್ಲರೂ ಜಾಗೃತರಾಗಿ ವ್ಯಾಯಾಮ, ಪ್ರಾಣಾಯಾಮ, ಕಷಾಯ ಮುಂತಾದವುಗಳಿಂದ ರೋಗವನ್ನು ತಡೆದು ಆರೋಗ್ಯವಂತರಾಗಿರಬೇಕು ಎಂದು ರಮಾಣನಂದ ಶ್ರೀಗಳು ಅಭಿಪ್ರಾಯಪಟ್ಟರು.

ಇನ್ನೂ ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಪದಾಧಿಕಾರಿಗಳ ಆಯ್ಕೆಗೆ ತಮ್ಮದೇ ಆದ ಸಮಿತಿ ರಚನೆ ಮಾಡಿ ಅದರ ಮೂಲಕ ಸೇರ್ಪಡೆ ಹಾಗೂ ಇನ್ನುಳಿದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರು ಬಿ.ಕೆ ತಿಮ್ಮರಾಜು ತಿಳಿಸಿದರು.

Edited By : Vijay Kumar
Kshetra Samachara

Kshetra Samachara

06/01/2022 07:52 pm

Cinque Terre

204

Cinque Terre

0