ಬೆಂಗಳೂರು: ಮೂರನೇ ಕಾರ್ತಿಕ ಸೋಮವಾರದ ಅಂಗವಾಗಿ ಬೆಂಗಳೂರು ಪೂರ್ವ ತಾಲೂಕು ಕೆ.ಆರ್. ಪುರಂ ಐತಿಹಾಸಿಕ ದೇವಾಲಯ ವೆಂಕಯ್ಯನಕೆರೆ ಸಮೀಪದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಜರುಗಿತು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭಾಗವಹಿಸಿದರು. ಪ್ರತಿವರ್ಷವೂ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆ ಕೈಂಕರ್ಯ ನಡೆಯುತ್ತವೆ.
ಅಲ್ಲದೆ, ಕಾರ್ತಿಕ ಮಾಸದಲ್ಲಿ ರಾಮಮೂರ್ತಿ ನಗರ, ವೈಟ್ ಫೀಲ್ಡ್, ಹೊಸಕೋಟೆ, ದೇವನಹಳ್ಳಿ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಅಷ್ಟೇ ಉತ್ಸಾಹದಿಂದ ಈ ಭಕ್ತಾದಿಗಳು ದೇವಸ್ಥಾನದ ಆವರಣದಲ್ಲಿ ದೀಪ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ.
Kshetra Samachara
22/11/2021 09:29 pm