ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಭಾರತ ವಿಜ್ಞಾನದ ತೊಟ್ಟಿಲು; "ವಿಜ್ಞಾನ ಸಂವಹನ ಹಬ್ಬ" ದಲ್ಲಿ ಶಾಸಕ ವಿಶ್ವನಾಥ್ ವರ್ಣನೆ

ಯಲಹಂಕ: ಭಾರತ ಸಾವಿರಾರು ವರ್ಷಗಳ ಮೊದಲೇ ವಿಜ್ಞಾನ‌ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿತ್ತು. ರಾಮಾಯಣದ ಪುಷ್ಪಕ ವಿಮಾನ, ರಾಮಸೇತು, ಅಶೋಕ ಸ್ತಂಭ ನಿರ್ಮಾಣ ಇವೆಲ್ಲ ಅತ್ಯದ್ಭುತಗಳೇ ಸರಿ! ವರಾಹಮಿಹಿರಾ, ಆರ್ಯಭಟ ಹೀಗೆ ಹತ್ತು ಹಲವು ರೀತಿ ಭಾರತ ವಿಜ್ಞಾನ ರಂಗಕ್ಕೆ ಕೊಡುಗೆ ನೀಡಿದೆ ಎಂದು ವಿಶ್ವನಾಥ್ ಭಾರತದ ವಿಜ್ಞಾನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಫೆಬ್ರವರಿ 28ರಂದು ವಿಜ್ಞಾನ ದಿನಾಚರಣೆ. ಇಂದಿನಿಂದ ಫೆ. 28ರ ವರೆಗೂ ದೇಶಾದ್ಯಂತ ವಿಜ್ಞಾನ ಸಂವಹನ ಹಬ್ಬ ನಡೆಯುತ್ತಿದೆ. ಈ ಹಬ್ಬದ ಅಂಗವಾಗಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಯಲಹಂಕದಲ್ಲಿ ವಿಜ್ಞಾನ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಕರ್ನಾಟಕ ವಿಜ್ಞಾನ & ತಂತ್ರಜ್ಞಾನ ಕೇಂದ್ರ ಯಲಹಂಕದಲ್ಲಿ ಒಂದು ವಾರ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಿದೆ.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿಗಾಗಿ ದೇಶಾದ್ಯಂತ 75 ಕಡೆ ವಿಜ್ಞಾನ‌ ಕ್ಷೇತ್ರದ ಸಾಧನೆ, ಇಸ್ರೋ & DRDO ಹಾಗೂ ಭಾರತದ ವಿಜ್ಞಾನ & ತಂತ್ರಜ್ಞಾನ ಕ್ಷೇತ್ರದಲ್ಲಾಗಿರುವ ಸಾಧನೆಗಳ ಬಗ್ಗೆ ದೇಶದ ಜನತೆಗೆ ತಿಳಿಸಲಾಗುತ್ತಿದೆ. ವಿಜ್ಞಾನ ಕ್ಷೇತ್ರದ ಚರ್ಚೆ, ಸ್ಪರ್ಧೆ, ವಿಚಾರ ಸಂಕಿರಣ, ವಸ್ತುಪ್ರದರ್ಶನ ಗೋಷ್ಠಿ ಮೊದಲಾದ ಕಾರ್ಯಕ್ರಮ‌ ಹಮ್ಮಿಕೊಂಡಿದೆ.

ಫೆ. 22ರಿಂದ 28ರ ವರೆಗೆ ನಡೆಯುವ ಕಾರ್ಯಕ್ರಮವನ್ನು ಎಲ್ಲರೂ ವೀಕ್ಷಿಸಿ ಎಂದು ಮಾಹಿತಿ & ತಂತ್ರಜ್ಞಾನ ಸಚಿವ ಅಶ್ವತ್ಥನಾರಾಯಣ ಯಲಹಂಕದಲ್ಲಿ ತಿಳಿಸಿದರು.

- SureshBabu Public Next Yalahanka

Edited By : Nagesh Gaonkar
PublicNext

PublicNext

23/02/2022 04:44 pm

Cinque Terre

35.85 K

Cinque Terre

0

ಸಂಬಂಧಿತ ಸುದ್ದಿ