ಬೆಂಗಳೂರು: ನಗರದ ವೈಯಾಲಿ ಕಾವಲ್‌ನಲ್ಲಿ ಇರುವ ತಿರುಪತಿ ತಿರುಮಲಂ ದೇವಸ್ಥಾನ ಪ್ರತಿಷ್ಠಾಪನೆಗೊಂಡು 12 ವರ್ಷವಾದ ಹಿನ್ನಲೆಯಲ್ಲಿ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮವನ್ನು ಇದೇ ತಿಂಗಳ 9ರಿಂದ 11ರವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಪತ್ ರವಿ ನಾರಾಯಣನ್ ಅವರು, ಮೇ.9ರಿಂದ 11ವರೆಗೆ ಮೂರು ದಿನ ಯಾಗ, ಹೋಮ ಹವನ ದಂತಹ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ತಿರುಪತಿ ಅರ್ಚಕರೇ ಬರಲಿದ್ದಾರೆ. ಮಹಾ ಸಂಪ್ರೋಕ್ಷಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಭಕ್ತರಿಗೆ ಅವಕಾಶ ನಿರಕಾರಿಸಲಾಗಿದೆ. ಹೋಮ ಯಾಗದ ನಂತರ ದೇವಾಲಯದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪದ್ಮಾವತಿ ಸನ್ನಿಧಿ, ಕಲ್ಯಾಣಕಟ್ಟೆ ಪುಷ್ಕರಣಿ, ಉತ್ಸವ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದ್ದು, ಟಿಟಿಡಿ ಅನುಮತಿ ನೀಡಿದೆ ಎಂದರು.
Kshetra Samachara
07/05/2022 04:08 pm