ಬೆಂಗಳೂರು: ನಗರ ಹೊರವಲಯದ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ ಹೊಳೆದಬ್ಬಗೂಳೇಶ್ವರಸ್ವಾಮಿ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಇನ್ನು ತಮ್ಮನಾಯನಹಳ್ಳಿ ಗುಡಿ ತೋಪನಲ್ಲಿ ನೆಲಸಿರುವ ಐತಿಹಾಸಿಕ ಪುರಾತನ ದೇವಾಲಯ ಇದಾಗಿದ್ದು ತಮಿಳುನಾಡು ಗಡಿಭಾಗದ ಮಠಾಧೀಶರಾದ ಶಿವಾನಂದ ಶಿವಾಚಾರ್ಯ ಅವರು ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಇನ್ನು ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಜಾತ್ರಾ ಮಹೋತ್ಸವನ್ನು ಸರಳವಾಗಿ ಮಾಡಿದ್ದು, ಈ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ವರ್ಷ ರೈತರಿಗೆ ಒಳ್ಳೆ ಪಸಲನ್ನು ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದರು. ಇನ್ನು ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.
Kshetra Samachara
03/05/2022 10:41 pm