ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸವ ಜಯಂತಿಯಲ್ಲಿ ಶಾಸಕ ಬಿ ಶಿವಣ್ಣ ಭಾಗಿ

ಆನೇಕಲ್: ಬಸವಣ್ಣನವರ 889ನೇ ಜಯಂತಿ ಹಿನ್ನೆಲೆಯಲ್ಲಿ ಇಂದು ಆನೇಕಲ್ ಪಟ್ಟಣದ ಬಸವೇಶ್ವರ ಸನ್ನಿಧಿಯಲ್ಲಿ ವಿಶೇಷವಾಗಿ ವೀರಶೈವ ಲಿಂಗಾಯಿತ ಸಂಘದ ವತಿಯಿಂದ ಆಚರಣೆ ಮಾಡಲಾಯಿತು.

ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಮಹಾ ಸಂದೇಶವನ್ನು ನೀಡಿದ ಬಸವಣ್ಣನವರ ಜಯಂತಿಯನ್ನು ಸ್ಮರಣೆ ಮಾಡುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಅದಲ್ಲದೆ ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಪ್ರತಿಮೆಯ ಇರಿಸಿ ಮೆರವಣಿಗೆ ಮಾಡಲಾಯಿತು.

ಬಸವಣ್ಣ ಜಯಂತಿ ಹಿಂದೂ ಹಬ್ಬವಾಗಿದ್ದು 12ನೇ ಶತಮಾನದ ಕವಿ-ತತ್ವಜ್ಞಾನಿ ಮಹಾತ್ಮ ಬಸವೇಶ್ವರರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಬಸವಣ್ಣ ಅವರು ಶೈವ ಧರ್ಮದ ಭಕ್ತಿ ಚಳವಳಿಯಲ್ಲಿ ಪ್ರಸಿದ್ಧ ಸಂತರಾಗಿದ್ದರು. ಇವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು.

Edited By : Manjunath H D
Kshetra Samachara

Kshetra Samachara

03/05/2022 10:14 pm

Cinque Terre

2.29 K

Cinque Terre

0

ಸಂಬಂಧಿತ ಸುದ್ದಿ