ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ; ಮುನೇಶ್ವರನ ಪೂಜಾ ಸಂಭ್ರಮ, ಭಾವೈಕ್ಯದ ಹಬ್ಬಕ್ಕೆ ಸಾಕ್ಷಿಯಾದ ಊರ ಜನ

ಬೆಂಗಳೂರು ; ನಗರದ ದಕ್ಷಿಣ ಗ್ರಾಮಾಂತರದ ಡೊಡ್ಡಿಪಾಳ್ಯ,ಕಾಮೈನಪಾಳ್ಯ‌ ಗ್ರಾಮಗಳಲ್ಲಿ ಪ್ರತಿವರ್ಷವೂ ಮುನೇಶ್ವರ ಪೂಜೆ ಸಂಭ್ರಮದಿಂದ ಮಾಡ್ತಾರೆ. ಈ ಮರದಲ್ಲಿ ಕಾಣ್ತಿರುವ ಮುನೇಶ್ವರನನ್ನು ಪ್ರತಿಗ್ರಾಮದವ್ರು ಆರಾಧಿಸುತ್ತಾರೆ.

ಎಲ್ಲರೂ ಸೇರಿ ಕೂಡಿ ಮನೆಗಳಿಂದ ಅಕ್ಕಿ,ರಾಗಿ,ಅವರಿ, ಬೆಳೆದ ಬೇಳೆಗಳು, ಕುಂಬಳಕಾಯಿ ಈ ತರ ದಾನ ಮಾಡಿ, ಒಟ್ಟುಗೂಡಿ ಪೂಜೆ ಮಾಡ್ತಾ, ದೇವರಿಗೆ ಅರ್ಪಿಸ್ತಾರೆ.

ಮಳೆಗಾಲದ ಪ್ರಾರಂಭದಲ್ಲಿ ಹೊಲ ಹೂಳುತ್ತಾ ನಂತರ ಕಾಲಕಾಲಕ್ಕೆ ಮಳೆ-ಬೆಳೆ ಆಗಲಿ ಅಂತ ಈ ಪೂಜೆಯನ್ನ ಮಾಡಿಸುತ್ತಾರೆ. ಊರಿನವರೆಲ್ಲಾ ಸೇರಿ ಪೂಜೆ ಮಾಡಿಸಿ, ದೇವರ ಹೆಸರಿನಲ್ಲಿ‌ ಒಂದು ಕಡೆ ಸೇರಿ ಅನ್ನ ಸಾರು, ಮುದ್ದೆ, ಪಾಯಸ, ಕೋಸಂಬರಿ ಮಾಡಿಸಿ ದೇವರಿಗೆ ನೈವೇದ್ಯ ಮಾಡಿ, ನಂತರ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ.

ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

25/04/2022 07:34 pm

Cinque Terre

45.86 K

Cinque Terre

0

ಸಂಬಂಧಿತ ಸುದ್ದಿ