ಆನೇಕಲ್ : ದ್ರೌಪದಿ ದೇವಿಯ ಐತಿಹಾಸಿಕ ಕರಗ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಕರಗ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು..
ಕರಗ ಮಹೋತ್ಸವಕ್ಕೆ ಈ ಬಾರಿ ಭಕ್ತಸಾಗರವೇ ಹರಿದು ಬಂದಿತ್ತು, ತಿಗಳ ವಹ್ನಿಕುಲಸ್ಥರ ಕುಲದೇವತೆಯಾಗಿರುವ ದ್ರೌಪದಿಯ ದೇವಿಯ ಕರಗವನ್ನ ಈ ಬಾರಿ ಚಂದ್ರಪ್ಪ ಹೊತ್ತು ಹೊರಬರುತ್ತಿದ್ದಂತೆ ವೀರ ಕುಮಾರರು ದಿಕ್ ದೀಲ್ ಎಂದು ಘೋಷಣೆಗಳನ್ನು ಹಾಕಿ ಕೈಯಲ್ಲಿದ್ದ ಕತ್ತಿಗಳಿಂದ ದೇಹ ದಂಡಿಸಿಕೊಂಡು ಸಾಥ್ ನೀಡಿದರು.
ಬಳಿಕ ಆನೇಕಲ್ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಕರಗ ಮಹೋತ್ಸವದಲ್ಲಿ ಆನೇಕಲ್ ವಹ್ನಿಕುಲ ಆಡಳಿತ ಮಂಡಳಿಯವರು ಭಾಗವಹಿಸಿ ಈ ಬಾರಿ ದೇಶದಿಂದ ಮಹಾಮಾರಿ ಕೊರೊನಾ ತೊಲಗಿಸಲೇಂದು ದೇವಿಯಲ್ಲಿ ಪ್ರಾರ್ಥಿಸಿದರು.
PublicNext
17/04/2022 08:25 pm